ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ನೆರವೇರಿತು. ಕೊಡವ ಸಾಂಪ್ರದಾಯಿಕ ಉಡುಗೆ ಹಾಗೂ ಚಿನ್ನಾಭರಣದಲ್ಲಿ ನವ ಜೋಡಿಗಳು ಮಿಂಚಿದರು.

ವಿರಾಜಪೇಟೆ(ಡಿ.24): ಭಾರತದ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಮಾಡೆಲ್ ಕರನ್ ಮೇದಪ್ಪ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ನೆರವೇರಿತು. ಕೊಡವ ಸಾಂಪ್ರದಾಯಿಕ ಉಡುಗೆ ಹಾಗೂ ಚಿನ್ನಾಭರಣದಲ್ಲಿ ನವ ಜೋಡಿಗಳು ಮಿಂಚಿದರು.

ಟೆನಿಸಿಗ ರೋಹನ್ ಬೋಪಣ್ಣ, ಅಶ್ವಿನಿ ಅವರ ತರಬೇತುದಾರ ಡೆಕ್ಲೈನ್ ಲಿಯಾಟೋ, ಮಾಜಿ ಹಾಕಿ ಆಟಗಾರ ವಿನೋದ್ ಶಿವಪ್ಪ ಸೇರಿದಂತೆ ಇನ್ನಿತರ ಗಣ್ಯರು ನವಜೋಡಿಗೆ ಶುಭ ಹಾರೈಸಿದರು.