ಉಡುಪಿ[ಜು.19]: ಶೀರೂರುಶ್ರೀ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅಷ್ಟಮಠಾಧೀಶರು ಗೈರಾಗಲಿದ್ದಾರೆ.

ಹುಬ್ಬಳ್ಳಿಯಲ್ಲಿರುವ ಪೇಜಾವರ ಶ್ರೀಗಳು ಹಾಗೂ ಸುಗುಣೇಂದ್ರ ಶ್ರೀಗಳು ಅಮೆರಿಕಾದಲ್ಲಿರುವುದರಿಂದ ಅಂತಿಮ ದರ್ಶನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನುಳಿದ ಐವರು ಉಡುಪಿಯಲ್ಲಿದ್ದರೂ ಅಂತಿಮ ದರ್ಶನಕ್ಕೆ ಹಾಜರಾಗುತ್ತಿಲ್ಲ.

ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸೋದೆ ಮಠದ ಪೀಠಾಧಿಪತಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಮಠದ ಪೀಠಾಧಿಪತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಪೀಠಾಧಿಪತಿ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ಪೀಠಾಧಿಪತಿ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅಂತಿಮ ದರ್ಶನ ಪಡೆಯದ ಶ್ರೀಗಳು. ಉಡುಪಿ ಕೃಷ್ಣಮಠದ ಆವರಣದಲ್ಲಿ ಧಾರ್ಮಿಕ ಕ್ರಿಯೆ ನಡೆಯುತ್ತಿದೆ.