Asianet Suvarna News Asianet Suvarna News

ನನ್ನ ವಿರುದ್ಧದ ಕೇಸು ಖುಲಾಸೆ ಆಗಿದೆ: ಅಶೋಕ್‌ ಕುಮಾರ್‌

ಮರಿಲಿಂಗೇಗೌಡ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ನೀಡಿರುವ ದಾಖಲೆಗಳೆಲ್ಲವೂ ಸುಳ್ಳು, ನನ್ನ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಿದ ತಿಲಕನಗರ ಠಾಣಾ ಪೊಲೀಸರು ಮತ್ತು ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಪ್ರತ್ಯೇಕ ‘ಬಿ ರಿಪೋರ್ಟ್‌' ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ಕೋರ್ಟ್‌ ಪ್ರಕರಣ ಇತ್ಯರ್ಥಪಡಿಸಿ, ನನ್ನ ವಿರುದ್ಧದ ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ, ಮರಿಲಿಂಗೇಗೌಡ ಈ ಸತ್ಯ ಮುಚ್ಚಿಟ್ಟು ಪ್ರಕರಣ ಇನ್ನೂ ಪ್ರಗತಿಯಲ್ಲಿದೆ ಎಂದು ಸುಳ್ಳು ಮಾಹಿತಿ ನೀಡಿ ಮಾಧ್ಯಮಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

Ashok Kumar Refutes RTI Activist Allegations

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ವಿರುದ್ಧ ಕೇಳಿಬಂದಿದ್ದ ಅಂಕಪಟ್ಟಿಹಗರಣದ ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದೆ. ಆದರೆ, ಆರ್‌ಟಿಐ ಕಾರ್ಯಕರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್‌ ಇದನ್ನು ಮುಚ್ಚಿಟ್ಟು ಪ್ರಕರಣ ಇನ್ನೂ ಪ್ರಗತಿಯಲ್ಲಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರ್‌ಜಿಯುಎಚ್‌ಎಸ್‌ ಮಾಜಿ ಮೌಲ್ಯಮಾಪನ ಕುಲಸಚಿವ ಎನ್‌.ಎಸ್‌. ಅಶೋಕ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಮರಿಲಿಂಗೇಗೌಡ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ನೀಡಿರುವ ದಾಖಲೆಗಳೆಲ್ಲವೂ ಸುಳ್ಳು, ನನ್ನ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಿದ ತಿಲಕನಗರ ಠಾಣಾ ಪೊಲೀಸರು ಮತ್ತು ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಪ್ರತ್ಯೇಕ ‘ಬಿ ರಿಪೋರ್ಟ್‌' ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ಕೋರ್ಟ್‌ ಪ್ರಕರಣ ಇತ್ಯರ್ಥಪಡಿಸಿ, ನನ್ನ ವಿರುದ್ಧದ ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ, ಮರಿಲಿಂಗೇಗೌಡ ಈ ಸತ್ಯ ಮುಚ್ಚಿಟ್ಟು ಪ್ರಕರಣ ಇನ್ನೂ ಪ್ರಗತಿಯಲ್ಲಿದೆ ಎಂದು ಸುಳ್ಳು ಮಾಹಿತಿ ನೀಡಿ ಮಾಧ್ಯಮಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ, ನನ್ನ ವಿರುದ್ಧ ರಾಜ್ಯಪಾಲರಿಗೆ ಅವರು ಬರೆದಿರುವ ಪತ್ರದಲ್ಲೂ ಪ್ರಕರಣದಿಂದ ನಾನು ಖುಲಾಸೆಯಾಗಿರುವುದನ್ನು ಮುಚ್ಚಿಟ್ಟಿದ್ದಾರೆ. ಶೀಘ್ರದಲ್ಲೇ ರಾಜ್ಯಪಾಲರನ್ನೂ ಬೇಟಿ ಮಾಡಿ ಪ್ರಕರಣ ಖುಲಾಸೆಯಾಗಿರುವ ಬಗ್ಗೆ ವಿವರಣೆ ಸಲ್ಲಿಸುತ್ತೇನೆ ಎಂದು ಬೆಂಗಳೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರೂ ಆದ ಅಶೋಕ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಷ್ಟೂಅಲ್ಲದೆ, ನಾನು ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿ ನೇಮಕವಾಗಿರುವುದಾಗಿಯೂ ಸುಳ್ಳು ಮಾಹಿತಿ ನೀಡಿದ್ದಾರೆ. ವಿಶೇಷಾಧಿಕಾರಿ ಸ್ಥಾನಕ್ಕೆ ನಾನು ಅರ್ಜಿ ಸಲ್ಲಿಸಿದ್ದು ನಿಜ. ಆದರೆ, ಅದಾಗಲೇ ವಿವಿ ಕಾರ್ಯಾರಂಭವಾಗಿದ್ದರಿಂದ ವಿಶೇಷಾಧಿಕಾರಿ ನೇಮಕ ಮಾಡಲು ಅವಕಾಶ ಇದೆಯೇ ಎಂದು ವಿವರಣೆ ಕೋರಿ ಸರ್ಕಾರ ವಿವಿಯ ಕುಲಪತಿ ಅವರಿಗೆ ಪತ್ರ ಬರೆದಿತ್ತು. ಹಾಲಿ ಕುಲಪತಿ ಅವರು ಇದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಹಾಗಾಗಿ ನನ್ನನ್ನು ವಿಶೇಷಾಧಿಕಾರಿಯನ್ನಾಗಿ ನೇಮಕ ಮಾಡಿಯೇ ಇಲ್ಲ. ಆದರೂ, ಮರಿಲಿಂಗೇಗೌಡ ನಾನು ವಿಶೇಷಾಧಿಕಾರಿಯಾಗಿ ನೇಮಕವಾಗಿರುವುದಾಗಿ ತಾವೇ ಊಹಿಸಿಕೊಂಡು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಖಾಲಿ ಇರುವ ಮೈಸೂರು ವಿವಿಯ ಕುಲಪತಿ ಸ್ಥಾನಕ್ಕೆ ನಾನು ಕೂಡ ಅರ್ಜಿ ಸಲ್ಲಿಸಿದ್ದು, ಆಕಾಂಕ್ಷಿಯಾಗಿದ್ದೇನೆ. ಇದನ್ನು ತಪ್ಪಿಸುವ ಸಲುವಾಗಿ ಹಾಗೂ ನನ್ನ ಘನತೆ ಹಾಳು ಮಾಡಲು ನನ್ನ ವಿರುದ್ಧ ಕಾಣದ ಕೈಗಳು ವಾಮಮಾರ್ಗದ ಮೂಲಕ ಪ್ರಯತ್ನ ಮಾಡುತ್ತಿವೆ. ಇದಕ್ಕೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios