ಅಶೋಕ್ ಖೇಣಿಗೆ ಮಣೆ ಹಾಕ್ತಾರಾ ಸಿಎಂ?

First Published 28, Mar 2018, 1:42 PM IST
Ashok Kheni May not get Ticket
Highlights

ಕೈ  ಪಾಳಯ ಸೇರಿದ  ಅಶೋಕ್ ಖೇಣಿಗೆ ಟಿಕೆಟ್ ಸಿಗುವುದು ಇನ್ನು ನಿಶ್ಚಿತವಾಗಿಲ್ಲ.  ಟಿಕೆಟ್ ಫೈನಲ್ ಏನಿದ್ದರೂ ಸ್ಕ್ರೀನಿಂಗ್ ಕಮಿಟಿ, ಕಾಂಗ್ರೆಸ್  ಕೇಂದ್ರ ಚುನಾವಣ ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಹೇಳಿದ್ದಾರೆ.  
ಬೀದರ್ ದಕ್ಷಿಣ ಕ್ಷೇತ್ರಕ್ಕೆ ಎರಡು ಹೆಸರನ್ನ ಶಿಫಾರಸ್ಸು ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ  ಪರಮೇಶ್ವರ್  ನಿರ್ಧಾರಿಸಿದ್ದಾರೆ. 

ಬೆಂಗಳೂರು (ಮಾ. 28): ಇತ್ತೀಚಿಗಷ್ಟೇ  ಕೈ  ಪಾಳಯ ಸೇರಿದ  ಅಶೋಕ್ ಖೇಣಿಗೆ ಟಿಕೆಟ್ ಸಿಗುವುದು ಇನ್ನು ನಿಶ್ಚಿತವಾಗಿಲ್ಲ.  ಟಿಕೆಟ್ ಫೈನಲ್ ಏನಿದ್ದರೂ ಸ್ಕ್ರೀನಿಂಗ್ ಕಮಿಟಿ, ಕಾಂಗ್ರೆಸ್  ಕೇಂದ್ರ ಚುನಾವಣ ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಹೇಳಿದ್ದಾರೆ.  

ಬೀದರ್ ದಕ್ಷಿಣ ಕ್ಷೇತ್ರಕ್ಕೆ ಎರಡು ಹೆಸರನ್ನ ಶಿಫಾರಸ್ಸು ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ  ಪರಮೇಶ್ವರ್  ನಿರ್ಧಾರಿಸಿದ್ದಾರೆ. 

ಅಶೋಕ್ ಖೇಣಿ ಹಾಗೂ ಧರ್ಮಸಿಂಗ್ ಅಳಿಯ ಚಂದ್ರಸಿಂಗ್ ಇಬ್ಬರ ಹೆಸರನ್ನ ಬೀದರ್ ದಕ್ಷಿಣ ಕ್ಷೇತ್ರಕ್ಕೆ ಶಿಫಾರಸ್ಸು ಮಾಡಲಾಗಿದೆ.  ಬೀದರ್ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಮಾತ್ರ ಒಂದು ಹೆಸರು ಸೂಚನೆ ಮಾಡಲಾಗಿದೆ.  ಇನ್ನುಳಿದ ಮೂರು ಕ್ಷೇತ್ರಕ್ಕೆ ಎರಡು ಅಭ್ಯರ್ಥಿಗಳ ಹೆಸರನ್ನು ಜಿಲ್ಲಾ ಉಸ್ತುವಾರಿ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. 

ಭಾಲ್ಕಿಯಿಂದ  ಈಶ್ವರ್ ಖಂಡ್ರೆ,  ಹುಮ್ನಾಬಾದ್’ನಿಂದ  ರಾಜಶೇಖರ್ ಪಾಟೀಲ್,  ಬೀದರ್ ದಕ್ಷಿಣದಿಂದ ಅಶೋಕ್ ಖೇಣಿ, ಚಂದ್ರಸಿಂಗ್, ಬೀದರ್’ನಿಂದ ರಹೀಮ್ ಖಾನ್,  ಔರಾದ್’ನಿಂದ  ಭಿಮಸೇನ್ ರಾವ್ ಸಿಂಧೆ, ವಿಜಯ ಕುಮಾರ್ ಕೌಡಾಳೆ
ಬಸವಕಲ್ಯಾಣದಿಂದ ನಾರಾಯಣ ಮತ್ತು ಶಿವರಾಜ್ ನರಶೇಟ್ಟಿ ನಡುವೆ ತೀವ್ರ ಪೈಪೋಟಿ ಇದೆ. 

loader