ಅಸಾರಾಂ ಬಾಪು ಪ್ರಕರಣ ವಿಳಂಬ; ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ
ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಪ್ರಕರಣವನ್ನು ಇನ್ನಷ್ಟು ವಿಳಣಬ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜೊತೆಗೆ ಅತ್ಯಾಚಾರ ಸಂತ್ರಸ್ಥೆಯನ್ನು ಇದುವರೆಗೂ ಯಾಕೆ ವೈದ್ಯಕೀಯ ಪರೀಕ್ಷೆ ಮಾಡಿಲ್ಲ ಎಂದು ನ್ಯಾಯಾಲಯ ರಾಜ್ಯ ಪರ ವಕೀಲರನ್ನು ಪ್ರಶ್ನಿಸಿದೆ.
ನವದೆಹಲಿ (ಆ.28): ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಪ್ರಕರಣವನ್ನು ಇನ್ನಷ್ಟು ವಿಳಣಬ ಮಾಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜೊತೆಗೆ ಅತ್ಯಾಚಾರ ಸಂತ್ರಸ್ಥೆಯನ್ನು ಇದುವರೆಗೂ ಯಾಕೆ ವೈದ್ಯಕೀಯ ಪರೀಕ್ಷೆ ಮಾಡಿಲ್ಲ ಎಂದು ನ್ಯಾಯಾಲಯ ರಾಜ್ಯ ಪರ ವಕೀಲರನ್ನು ಪ್ರಶ್ನಿಸಿದೆ.
ನ್ಯಾ. ಎನ್.ವಿ ರಾಮಣ್ಣ ಮತ್ತು ಅಮಿತವ್ ರಾಯ್ ನೇತೃತ್ವದ ಪೀಠವು ಪ್ರಕರಣದ ವಿಳಂಬಕ್ಕೆ ಸಂಬಂಧಿಸಿದಂತೆ ಅಫಡವಿಟ್ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ದೀಪಾವಳಿ ನಂತರ ಮುಂದೂಡಿದೆ. ಈ ಹಿಂದೆ ನ್ಯಾ. ಖೇಹರ್ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಇನ್ನಷ್ಟು ತ್ವರಿತಗೊಳಿಸುವಂತೆ ಗುಜರಾತ್ ತ್ವರಿತ ನ್ಯಾಯಾಲಯಕ್ಕೆ ಸೂಚಿಸಿದ್ದರು.
ಅಸಾರಾಮ್ ಬಾಪುರವರು ಅತ್ಯಾಚಾರ ಆರೋಪ ಹಾಗೂ ಎರಡು ಅಕ್ರಮ ಬಂದನ ಆರೋಪವನ್ನು ಎದುರಿಸುತ್ತಿದ್ದಾರೆ. ಒಂದು ಪ್ರಕರಣ ರಾಜಸ್ಥಾನದಲ್ಲಿ ದಾಖಲಾಗಿದ್ದು, ಇನ್ನೊಂದು ಗುಜರಾತ್’ನಲ್ಲಿ ದಾಖಲಾಗಿದೆ.