ಕಪಿಲ್ ಮಿಶ್ರ ತನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆಂದು ಸುನೀತಾ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಮಿಶ್ರ ರೀ-ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಮೇ.15): ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀನಿ ಅಂತಾ ರಾಜಕೀಯಕ್ಕೆ ಬಂದ ಆಮ್ ಆದ್ಮಿ ಪಕ್ಷದಲ್ಲಿ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪಗಳು ಸುರಿಮಳೆ ಶುರುವಾಗಿದೆ. ಕೇಜ್ರಿವಾಲ್ ಮತ್ತು ಕಪಿಲ್ ಮಿಶ್ರ ನಡುವೆ ನಡೀತಿದ್ದ ಆರೋಪಗಳ ಸರಣಿಗೆ ಈಗ ಕೇಜ್ರಿವಾಲ್ ಪತ್ನಿ ಎಂಟ್ರಿ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಪಿಲ್ ಮಿಶ್ರ ತನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆಂದು ಸುನೀತಾ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಮಿಶ್ರ ರೀ-ಟ್ವೀಟ್ ಮಾಡಿದ್ದಾರೆ. ಇಬ್ಬರ ನಡುವೆಯೂ ಟ್ವಿಟ್ಟರ್ ವಾರ್ ಶುರುವಾಗಿದೆ. ನೀನು ನನ್ನನ್ನ ದೀದಿ ಅಂತಾ ಕರೀತಾ ಇದ್ದೆ. ಕಪಿಲ್ ಮಿಶ್ರ ಒಬ್ಬ ವಿಶ್ವಾಸಘಾತುಕ. ಪ್ರಕೃತಿಯೇ ಅವನಿಗೆ ಪಾಠ ಕಲಿಸುತ್ತೇ. ಅವನು ಮಾಡ್ತಿರುವುದು ಸುಳ್ಳು ಆರೋಪ. ಅಂತಾ ಸುನೀತಾ ಕೇಜ್ರಿವಾಲ್ ಟ್ವೀಟ್ ಮಾಡಿದ್ರೆ. ಅದಕ್ಕೆ ರೀ-ಟ್ವೀಟ್ ಮಾಡಿದ ಮಿಶ್ರಾ.. ಸುನೀತಾ ಅವ್ರಿಗೆ ಮನೆಯಲ್ಲಾಗುವ ಎಲ್ಲಾ ಬೆಳವಣಿಗೆಗಳು ತಿಳಿದಿದೆ.ಆದರೆ ಕೇಜ್ರಿವಾಲ್'ರ ಧರ್ಮಪತ್ನಿಯಾಗಿರುವುದರಿಂದ ಅವ್ರು ಧರ್ಮವನ್ನು ಬಿಡುತ್ತಿಲ್ಲ ಎಂದಿದ್ದಾರೆ.