Asianet Suvarna News Asianet Suvarna News

ಮೋದಿ ಹತ್ತಿರದಲ್ಲಿ ಕೇಜ್ರೀವಾಲ್

. ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲನೇ ಸ್ಥಾನದಲ್ಲಿದ್ದರೆ, ಕೇಜ್ರಿವಾಲ್ ಎರಡನೇ ಸ್ಥಾನಕ್ಕೆ ಕಳೆದ ವರ್ಷದ ನವೆಂಬರ್ನಲ್ಲಿ ತಲುಪಿದ್ದರು.

Arvind Kejriwals Twitter Followers Cross 10 Million

ನವದೆಹಲಿ(ಡಿ.11): ದೇಶದ ಎರಡನೇ ಅತಿ ಹೆಚ್ಚು ಟ್ವಿಟರ್ ಹಿಂಬಾಲಕರನ್ನು ಹೊಂದಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ರ ಹಿಂಬಾಲಕರ ಸಂಖ್ಯೆ 1 ಕೋಟಿ ದಾಟಿದೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲನೇ ಸ್ಥಾನದಲ್ಲಿದ್ದರೆ, ಕೇಜ್ರಿವಾಲ್ ಎರಡನೇ ಸ್ಥಾನಕ್ಕೆ ಕಳೆದ ವರ್ಷದ ನವೆಂಬರ್‌ನಲ್ಲಿ ತಲುಪಿದ್ದರು. ಇದೀಗ ಕೇಜ್ರಿವಾಲ್ ಟ್ವಿಟರ್ ಹಿಂಬಾಲಕರ ಸಂಖ್ಯೆ ಕೋಟಿಯ ಗಡಿಯನ್ನು ದಾಟಿರುವುದಲ್ಲದೆ, ಫೇಸ್‌ಬುಕ್‌ನಲ್ಲಿನ ಅವರ ಚಟುವಟಿಕೆಗಳಿಗೆ ವ್ಯಾಪಕ ಬೆಂಬಲ ದೊರೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅವರ ಸಾಮಾಜಿಕ ಜಾಲತಾಣ ಬೆಂಬಲಿಗರ ಸಂಖ್ಯೆ ಏರಿಕೆಯಾಗಿದೆ. ಫೇಸ್‌ಬುಕ್ ಲೈವ್ ವೀಡಿಯೊ ವೀಕ್ಷಿಸುವವರು, ಯೂಟ್ಯೂಬ್ ವೀಡಿಯೊ ವೀಕ್ಷಕರ ಸಂಖ್ಯೆಯೂ ಏರಿಕೆಯಾಗಿದೆ ಎಂದು ಆಪ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

Follow Us:
Download App:
  • android
  • ios