ದೆಹಲಿ ಸಿಎಂ ಹಾಗೂ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕಾರಿಗೆ ಕೈಯಲ್ಲಿ ಲಾಠಿ ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪೊಂದು ಮುತ್ತಿಗೆ ಹಾಕಿ ದಾಳಿ ನಡೆಸಿದೆ. 

ನವದೆಹಲಿ: ಉತ್ತರ ದೆಹಲಿಯ ನರೇಲಾ ಉಪನಗರದಲ್ಲಿ ದೆಹಲಿ ಸಿಎಂ ಹಾಗೂ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕಾರಿಗೆ ಕೈಯಲ್ಲಿ ಲಾಠಿ ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪೊಂದು ಮುತ್ತಿಗೆ ಹಾಕಿ ದಾಳಿ ನಡೆಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೃಷ್ಟವಶಾತ್ ಕಾರಿನ್ನಲ್ಲಿದ್ದ ಸಿಎಂ ಸೇರಿ ಇತರರು ಅಪಾಯವಿಲ್ಲದೇ ಪಾರಾಗಿದ್ದಾರೆ. 

ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲು ಶುಕ್ರವಾರ ಮಧ್ಯಾಹ್ನ ತಮ್ಮ ಬೆಂಗಾವಲು ವಾಹನದ ಜೊತೆ ತೆರಳುತ್ತಿದ್ದಾಗ, ಬಿಜೆಪಿ ಪಕ್ಷದವರು ಎನ್ನಲಾದ 100 ಕ್ಕಿಂತ ಹೆಚ್ಚು ಮಂದಿಯ ತಂಡ ಕೇಜ್ರಿವಾಲ್ ಕಾರಿನ ಕಿಟಕಿ ಗಾಜುಗಳನ್ನು ಪುಡಿಗಟ್ಟಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.