ಭ್ರಷ್ಟಚಾರ ವಿರೋಧಿ ಆಂದೋಲನದ ಹೆಸರು ಹೇಳಿಕೊಂಡು, ಆಮ್ ಆದ್ಮಿ ಮುಂದಿಟ್ಟಕೊಂಡು ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಅವರು ಅಧಿಕಾರ ಸಿಕ್ಕ ನಂತರ ದೊಡ್ಡವರ ವಿರುದ್ಧ ಹೋರಾಟ ಮಾಡುವುದರಲ್ಲೇ ನಿರತರಾಗಿದ್ದಾರೆ

ದೆಹಲಿ(ನ.24): ಇತ್ತ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ನೋಟು ನಿಷೇಧ ವಿರುದ್ಧ ತೊಡೆ ತಟ್ಟಿದ್ದು, ಪ್ರಧಾನಿ ಮೋದಿ ವಿರುದ್ಧ ಹೋರಾಟಕ್ಕೆ ನಿಂತಿದ್ದರೆ, ಇತ್ತ ಮುಂಜಾನೆ ಎಎಪಿ ಕಚೇರಿ ಬಳಿ ಆಗಮಿಸಿದ ಮಹಿಳೆಯೊಬ್ಬರು ಕೇಜ್ರಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. 

ಭ್ರಷ್ಟಚಾರ ವಿರೋಧಿ ಆಂದೋಲನದ ಹೆಸರು ಹೇಳಿಕೊಂಡು, ಆಮ್ ಆದ್ಮಿ ಮುಂದಿಟ್ಟಕೊಂಡು ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಅವರು ಅಧಿಕಾರ ಸಿಕ್ಕ ನಂತರ ದೊಡ್ಡವರ ವಿರುದ್ಧ ಹೋರಾಟ ಮಾಡುವುದರಲ್ಲೇ ನಿರತರಾಗಿದ್ದಾರೆ ಹೊರತು ಜನ ಸಾಮನ್ಯರ ಸಮಸ್ಯೆಗೆ ಕಿವಿಯಾಗಿಲ್ಲ ಎಂದು ಆರೋಪಿಸುತ್ತಿರುವ ವಿಡಿಯೋ ವೈರಲ್ ಆಗಿದೆ. 

ಸುಮ್ಮನೆ ಕೆಲಸ ಮಾಡದೆ ಅವರಿವ ವಿರುದ್ಧ ಆರೋಪ ಮಾಡಿಕೊಂಡು ಕಾಲ ತಳ್ಳುತ್ತಿರುವ ಕೇಜ್ರಿವಾಲ್, ಅಭಿವೃದ್ಧಿ ಕಾರ್ಯಗಳ ಗಮನ ಕೊಡುತ್ತಿಲ್ಲ ಎಂದು ಸಾಕ್ಷಿ ಸಮೇತ ಈ ಮಹಿಳೆ ಆರೋಪ ಮಾಡುತ್ತಿದ್ದಾರೆ.