ಅರವಿಂದ್ ಕೇಜ್ರಿವಾಲ್  ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆ ಇಂದು ನಡೆದಿದ್ದು ವಿತ್ತ ಸಚಿವ ಅರುಣ್ ಜೇಟ್ಲಿ ಪಾಟೀ ಸವಾಲು ಎದುರಿಸಿದರು. ಈ ಸಂದರ್ಭದಲ್ಲಿ ಜೇಠ್ಮಲಾನಿ ಹಾಗೂ ಜೇಟ್ಲಿ ನಡುವೆ ಕೋರ್ಟ್ ಆವರಣದಲ್ಲೇ ಮಾತಿನ ಜಟಾಪಟಿ ನಡೆದಿದೆ.  

ನವದೆಹಲಿ (ಮೇ.17): ಅರವಿಂದ್ ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆ ಇಂದು ನಡೆದಿದ್ದು ವಿತ್ತ ಸಚಿವ ಅರುಣ್ ಜೇಟ್ಲಿ ಪಾಟೀ ಸವಾಲು ಎದುರಿಸಿದರು. ಈ ಸಂದರ್ಭದಲ್ಲಿ ಜೇಠ್ಮಲಾನಿ ಹಾಗೂ ಜೇಟ್ಲಿ ನಡುವೆ ಕೋರ್ಟ್ ಆವರಣದಲ್ಲೇ ಮಾತಿನ ಜಟಾಪಟಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಟೀ ಸವಾಲು ಎದುರಿಸುವ ಸಂದರ್ಭದಲ್ಲಿ ಅರುಣ್ ಜೇಟ್ಲಿ, ಅರವಿಂದ್ ಕೇಜ್ರಿವಾಲ್ ಕೊಡಬೇಕಾಗಿರುವ ಪರಿಹಾರ ಮೊತ್ತವನ್ನು 10 ಕೋಟಿಗಿಂತಲೂ ಜಾಸ್ತಿ ಹೆಚ್ಚಿಸುತ್ತೇನೆಂಧು ಹೇಳಿದರು. ಆಗ ರಾಮ್ ಜೇಠ್ಮಲಾನಿ, ಅರುಣ್ ಜೇಟ್ಲಿ ಒಬ್ಬ ವಂಚಕ. ಅದನ್ನು ನಾನು ಪ್ರೂವ್ ಮಾಡಿ ತೋರಿಸುತ್ತೇನೆ. ನನ್ನ ಕಕ್ಷಿದಾರ (ಅರವಿಂದ್ ಕೇಜ್ರಿವಾಲ್) ಅನುಮತಿ ಪಡೆದೇ ಈ ಪದ ಬಳಸುತ್ತಿದ್ದೇನೆಂದು ಜೇಠ್ಮಲಾನಿ ಹೇಳಿದ್ದಾರೆ.