ರಿಲಯನ್ಸ್‌ ಇಂಡಸ್ಟ್ರೀಸ್‌ ಆಡಳಿತ ಮಂಡಳಿಯ ಹೆಚ್ಚುವರಿ ಸ್ವತಂತ್ರ ನಿರ್ದೇಶಕಿಯಾಗಿ, ಎಸ್‌ಬಿಐನ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರನ್ನು ನೇಮಿಸಲಾಗಿದೆ.

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಆಡಳಿತ ಮಂಡಳಿಯ ಹೆಚ್ಚುವರಿ ಸ್ವತಂತ್ರ ನಿರ್ದೇಶಕಿಯಾಗಿ, ಎಸ್‌ಬಿಐನ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರನ್ನು ನೇಮಿಸಲಾಗಿದೆ. 2018ರ ಅ.17ರಿಂದ ಮುಂದಿನ 5 ವರ್ಷಗಳ ಅವಧಿಗೆ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಸ್‌ಬಿಐನಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದ ಅರುಂಧತಿ 2017ರ ಅಕ್ಟೋಬರ್‌ನಲ್ಲಷ್ಟೇ ನಿವೃತ್ತಿಯಾಗಿದ್ದರು. ಅರುಂಧತಿ ಅವರು ಎಸ್‌ಬಿಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಗ್ರಾಹಕರಿಗೆ ಡಿಜಿಟಲ್‌ ಬ್ಯಾಂಕಿಂಗ್‌, ಕಾಮರ್ಸ್‌ ಮತ್ತು ಹಣಕಾಸು ಸೇವೆ ಒದಗಿಸುವ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಎಸ್‌ಬಿಐ ಮತ್ತು ರಿಲಯನ್ಸ್‌ ಜಿಯೋ ಒಪ್ಪಂದಕ್ಕೆ ಸಹಿ ಹಾಕಿದ್ದವು.