ರಾಹುಲ್ ಜನಿವಾರಧಾರಿ ಹಿಂದು ಹೇಳಿಕೆಗೆ ಟಾಂಗ್ | 22 ವರ್ಷ ಆಳಿದ್ದಕ್ಕೆ ಗುಜರಾತ್ ನಮಗೆ ತುಂಬಾ ಮಹತ್ವದ್ದು

ಸೂರತ್: ಗುಜರಾತ್ ಚುಣಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ವಾಕ್ಸಮರ ತಾರಕಕ್ಕೇರುತ್ತಿದ್ದು, ‘ರಾಹುಲ್ ಗಾಂಧಿ ಜನಿವಾರ ಧಾರಿ ಹಿಂದು’ ಎಂಬ ಹೇಳಿಕೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.‘ಬಿಜೆಪಿಯೇ ಅಸಲಿ ಹಿಂದುತ್ವ ಪರ ಪಕ್ಷ. ಜನರಿಗೆ ಅಸಲಿ (ಒರಿಜಿನಲ್) ಲಭ್ಯವಿರುವಾಗ ತದ್ರೂಪಿ ವಸ್ತುವನ್ನೇಕೆ ಅವರು ಖರೀದಿಸಬಯಸುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ.

ಈ ಮೂಲಕ ರಾಹುಲ್ ಅವರದ್ದು ನಕಲಿ ಹಿಂದುತ್ವ ಎಂದು ಜೇಟ್ಲಿ ಪರೋಕ್ಷವಾಗಿ ನುಡಿದಿದ್ದಾರೆ. ಇಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅವರು ಮಾತನಾಡಿದರು.

ಬಿಜೆಪಿಗೆ ಗುಜರಾತ್ ಏಕೆ ಮಹತ್ವದ್ದು ಎಂದು ವಿವರಿಸಿದ ಜೇಟ್ಲಿ, ‘80ರ ದಶಕದಲ್ಲಿ ರಾಜ್ಯದಲ್ಲಿ ಜಾತಿ ವಿಭಜನೆ ತೀವ್ರವಾಗಿತ್ತು. ಆದರೆ 22 ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಇದನ್ನು ದೂರ ಮಾಡಿ, ರಾಜ್ಯವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಿತು. 2 ದಶಕದಿಂದ ನಾವು ಯಶಸ್ವಿಯಾಗಿ ಈ ರಾಜ್ಯ ಆಳುತ್ತಿದ್ದೇವೆ. ಅದಕ್ಕೇ ಇದು ಮಹತ್ವದ್ದು’ ಎಂದರು.