ರಾಜಕೀಯ ದೇಣಿಗೆಯಲ್ಲಿ ಇನ್ನಷ್ಟು ಪಾರದರ್ಶಕತೆ  ತರುವ ನಿಟ್ಟಿನಲ್ಲಿ ಏನಾದರೂ ಸಲಹೆಗಳಿದ್ದಲ್ಲಿ  ನನಗೆ ತಿಳಿಸಿ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ  ಪ್ರತಿಪಕ್ಷಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

ನವದೆಹಲಿ (ಮಾ.30: ರಾಜಕೀಯ ದೇಣಿಗೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಏನಾದರೂ ಸಲಹೆಗಳಿದ್ದಲ್ಲಿ ನನಗೆ ತಿಳಿಸಿ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಪಕ್ಷಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಣಕಾಸು ಮಸೂದೆಯಲ್ಲಿ ರಾಜಕೀಯ ದೇಣಿಗೆಗೆ ಸಂಬಂಧಿಸಿದಂತೆ ನೀಡಲಾಗಿರುವ ಅವಕಾಶವನ್ನು ಪ್ರತಿಪಕ್ಷಗಳು ವಿರೋಧಿಸಿದ್ದವು. ಆದರೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸಲಹೆ ನೀಡಿಲ್ಲ. ಕೇವಲ ಶುದ್ಧತೆ, ಪಾರದರ್ಶಕತೆ ಎನ್ನುವ ನಾಮವಿಶೇಷಣಗಳನ್ನು ಮಾತ್ರ ಕೇಳಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಉತ್ತಮ ಸಲಹೆಗಳನ್ನು ನೀಡಿ. ನಾವು ಪರಿಗಣಿಸುತ್ತೇವೆ. ಉತ್ತಮ ಸಲಹೆಗಾಗಿ ನಾನು ಕಾಯುತ್ತಿದ್ದೇನೆ ಎಂದು ಜೇಟ್ಲಿ ಹೇಳಿದ್ದಾರೆ.