Asianet Suvarna News Asianet Suvarna News

ಮಹಾಮಸ್ತಕಾಭಿಷೇಕಕ್ಕೆ ಇಂದು ರಾಷ್ಟ್ರಪತಿ ಚಾಲನೆ

12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದಿನಿಂದ ಚಾಲನೆ ನೀಡಲಿದ್ದಾರೆ. ಈ ಮೂಲಕ ಮಸ್ತಕಾಭಿಷೇಕದ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಂತಾಗಲಿದೆ.

Artistes set to light up Mahamastakabhisheka

ಹಾಸನ(ಫೆ.07): ವಿಶ್ವಕ್ಕೆ ಶಾಂತಿಯ ಸಂದೇಶ ಸಾರುತ್ತಿರುವ ಭಗವಾನ್ ಬಾಹುಬಲಿಯ ವಿರಾಟ್‌'ಮೂರ್ತಿಯ 88ನೇ ಮಹಾಮಜ್ಜನಕ್ಕೆ ಶ್ರವಣಬೆಳಗೊಳ ಸಜ್ಜಾಗಿದೆ.

12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದಿನಿಂದ ಚಾಲನೆ ನೀಡಲಿದ್ದಾರೆ. ಈ ಮೂಲಕ ಮಸ್ತಕಾಭಿಷೇಕದ ಸಂಭ್ರಮಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಂತಾಗಲಿದೆ.

ಚಾವುಂಡರಾಯ ವೇದಿಕೆಯಲ್ಲಿ ಬೆಳಗ್ಗೆ 10.45ಕ್ಕೆ ರಾಷ್ಟ್ರಪತಿಗಳು ಮಹಾಮಸ್ತಕಾಭಿಷೇಕೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಎ.ಮಂಜು, ಮಹಾಮಸ್ತಕಾಭಿಷೇಕ ಸಮಿತಿ-2018ರ ರಾಜ್ಯಮಟ್ಟದ ಸಮಿತಿ ಸಹ ಅಧ್ಯಕ್ಷ ಕೆ.ಅಭಯ್ ಚಂದ್ರ ಜೈನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಆ ಬಳಿಕ ಗೊಮ್ಮಟ ಮೂರ್ತಿಗೆ ಪೂಜೆ, ಹೋಮ, ಹವನ ಹಾಗೂ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಅಧಿಕೃತವಾಗಿ ಆರಂಭಗೊಳ್ಳಲಿವೆ. ಮೊದಲ ಮಸ್ತಕಾಭಿಷೇಕ ಫೆ.17ರಂದು ನಡೆಯಲಿದೆ. 40 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ: ಮಸ್ತಕಾಭಿಷೇಕಕ್ಕೆ 40 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಕುಡಿವ ನೀರು,ಶೌಚಾಲಯ, ಊಟ, ಉಪಹಾರ, ವಸತಿ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Follow Us:
Download App:
  • android
  • ios