ಬೆಂಗಳೂರಿನಲ್ಲಿ ‌ಸಾಕಷ್ಟು‌ ಕೆರೆಗಳಿದ್ದವು‌ ಆದ್ರೆ‌ ಅವುಗಳಲ್ಲಿ‌ ಕೆಲವು ಕೆರೆಗಳು‌‌ ಮಾತ್ರ ಉಳಿದಿವೆ. ನೂರಾರು ಕೆರೆಗಳನ್ನ ಒಟ್ಟುಗೂಡಿಸಿ ಒಂದು ದೊಡ್ಡ ಕೆರೆ ಮಾಡಲು ಆರ್ಟ್ ಆಫ್ ಲಿವಿಂಗ್ ಆಶ್ರಮ ಮುಂದಾಗಿದೆ.
ಬೆಂಗಳೂರು(ಮಾ.06): ಬೆಂಗಳೂರಿನಲ್ಲಿ ಸಾಕಷ್ಟು ಕೆರೆಗಳಿದ್ದವು ಆದ್ರೆ ಅವುಗಳಲ್ಲಿ ಕೆಲವು ಕೆರೆಗಳು ಮಾತ್ರ ಉಳಿದಿವೆ. ನೂರಾರು ಕೆರೆಗಳನ್ನ ಒಟ್ಟುಗೂಡಿಸಿ ಒಂದು ದೊಡ್ಡ ಕೆರೆ ಮಾಡಲು ಆರ್ಟ್ ಆಫ್ ಲಿವಿಂಗ್ ಆಶ್ರಮ ಮುಂದಾಗಿದೆ.
ಕೈವಾರ ಬಳಿ ಇರುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಆರ್ಟ್ ಆಫ್ ಲಿವಿಂಗ್ ಆಶ್ರಮ ಕೈಗೆತ್ತುಕೊಂಡಿದೆ.. ಇದರಿಂದಾಗಿ ಕೈವಾರ ಸುತ್ತಮುತ್ತಲಿನ ಪ್ರದೇಶಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ನಡೆದಿದೆ.
ಇದರಿಂದಾಗಿ ರೈತರಿಗೆ ತುಂಬಾನೆ ಅನುಕೂಲವಾಗಿದೆ. ಈ ನೀರು ಬರಿ ಕೃಷಿ ಕಾರ್ಯಕಲ್ಲದೆ, ದನ-ಕರುಗಳಿಗೆ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಬರ ಪರಿಸ್ಥತಿಯಲ್ಲಿ ಕೊಂಚ ಮಟ್ಟಿಗಾದರೂ ನೀರಿನ ಸಮಸ್ಯೆ ನಿವಾರಣೆಯಾಗಿದೆ ಅಂತಾರೆ ಕೈವಾರದ ರೈತರು.
ಒಟ್ಟಾರೆ ಬರ ಪರಿಸ್ಥಿತಿಯಲ್ಲೂ ಕೆರೆಗಳನ್ನು ಉಳಿಸುವ ಕಾರ್ಯ ನಿರ್ವಾಹಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಿಬ್ಬಂದಿ ಕೆಲಸ ನಿಜಕ್ಕೂ ಶ್ಲಾಘನೀಯ.
