ನೈಜಿರೀಯಾ ಮೂಲದ ನಡುಬಾ ಜೋಸೆಪ್ ೨೫, ನೈಟ್ ಸಂಡೆ ರೋಜ್ (೩೨) ಬಂಧಿತರಾಗಿದ್ದಾರೆ. ಇವರು ಇಂದಿರಾನಗರದ ದ್ವಾರಕ ಅಪಾರ್ಟ್ಮೆಂಟ್ ಬಳಿ ಮಾದಕ ವಸ್ತುಗಳನ್ನು ಮಾರುತ್ತಿದ್ದರು ಎನ್ನಲಾಗಿದ್ದು, ಬಂಧಿತ ಆರೋಪಿಗಳಿಂದ ಸುಮಾರು ೨.೫ ಲಕ್ಷ ಮೌಲ್ಯದ ಕೊಕೇನ್ ವಶ ಪಡಿಸಿಕೊಳ್ಳಲಾಗಿದೆ.
ಬೆಂಗಳೂರು(ಅ.15): ಶನಿವಾರ ಬೆಂಗಳೂರಿನಲ್ಲಿ ಕಾರ್ಯಚರಣಗೆ ಇಳಿದ ಸಿಸಿಬಿ ಪೊಲೀಸರು ಮಾದಕ ವಸ್ತುಗಳ ಮಾರುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ನೈಜಿರೀಯಾ ಮೂಲದ ನಡುಬಾ ಜೋಸೆಪ್ ೨೫, ನೈಟ್ ಸಂಡೆ ರೋಜ್ (೩೨) ಬಂಧಿತರಾಗಿದ್ದಾರೆ. ಇವರು ಇಂದಿರಾನಗರದ ದ್ವಾರಕ ಅಪಾರ್ಟ್ಮೆಂಟ್ ಬಳಿ ಮಾದಕ ವಸ್ತುಗಳನ್ನು ಮಾರುತ್ತಿದ್ದರು ಎನ್ನಲಾಗಿದ್ದು, ಬಂಧಿತ ಆರೋಪಿಗಳಿಂದ ಸುಮಾರು ೨.೫ ಲಕ್ಷ ಮೌಲ್ಯದ ಕೊಕೇನ್ ವಶ ಪಡಿಸಿಕೊಳ್ಳಲಾಗಿದೆ.
ಬಂಧಿತರು ಟಿಸಿ ಪಾಳ್ಯದ ಬೆನ್ ಬಳಿ ಮಾದಕವಸ್ತುಗಳ ಖರೀದಿ ಮಾಡುತ್ತಿದ್ದರು ಎನ್ನಲಾಗಿದ್ದು, ಪರಿಚಯವಿರುವ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ವಿರುದ್ದ ಇಂದಿರಾನಗರ ಠಾಣೆ ಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಪ್ರಮುಖ ಅರೋಪಿ ಬೆನ್ ನಾಪತ್ತೆ, ಪೊಲೀಸರಿಂದ ಶೋಧ ನಡೆಲಾಗುತ್ತಿದೆ.