ವೀಕ್ಷಕರ ಸಮೀಕ್ಷಾ ಮಂಡಳಿ 'ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್' ಕಳೆದ ಒಂದು ವಾರದ ಅಂಕಿಅಂಶಗಳನ್ನು ನೀಡಿದ್ದು, ಇದರನ್ವಯ ಮೇ 12ರವರೆಗೆ ರಿಪಬ್ಲಿಕ್ ಟಿವಿ 2.11 ಮಿಲಿಯನ್ ಇಂಪ್ರೆಷನ್ ಅಥವಾ ಟೆವಿವಿಷನ್ ವ್ಯೂವರ್ ಶಿಪ್ ಇನ್ ಥೌಸೆಂಡ್ (ಟಿವಿಟಿ) ಗಳನ್ನು ಪಡೆದಿದೆ. ಅಲ್ಲದೆ ದೇಶದ ಪ್ರಮುಖ ಸುದ್ದಿ ವಾಹಿನಿಯೆನಿಸಿಕೊಂಡಿರುವ  'ಟೈಮ್ಸ್ ನೌ' ಅನ್ನು  ಹಿಂದಿಕ್ಕಿ ಶೇ.84.4ರಷ್ಟು ಹೆಚ್ಚಿನ ಮುನ್ನಡೆ ಪಡೆದಿದೆ. ಹಲವು ವರ್ಷಗಳ ಕಾಲ ಮೊದಲಸ್ಥಾನ ಅಲಂಕರಿಸಿದ್ದ ಟೈಮ್ಸ್'ನೌ ರಿಪಬ್ಲಿಕ್ ಬಂದ ಆರಂಭಗೊಂಡ ಮೊದಲ ವಾರದಲ್ಲಿ 1.14 ಮಿಲಿಯನ್ ವೀಕ್ಷಣೆಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.  

ಹಲವು ಗುರಿ, ನಿರೀಕ್ಷೆಗಳೊಂದಿಗೆ ಸಾರ್ವಜನಿಕರ ಮುಂದೆ ಕೇವಲ ಒಂದು ವಾರದ ಹಿಂದಷ್ಟೆ ಆರಂಭಗೊಂಡಿದ್ದಅರ್ನಾಬ್ ಗೋ'ಸ್ವಾಮಿ ನೇತೃತ್ವದ 'ರಿಪಬ್ಲಿಕ್' ಇಂಗ್ಲಿಷ್ ವಾಹಿನಿಗೆ ಭರ್ಜರಿ ಯಶಸ್ಸು ದೊರಕಿದೆ.

ಪ್ರಾರಂಭವಾದ ಒಂದು ವಾರದಲ್ಲಿ ಭಾರತದ ಅತಿರಥ ಹಾಗೂ ಮಹಾರಥರೆನಿಸಿಕೊಂಡಿದ್ದ ಎಲ್ಲ ಚಾನಲ್'ಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದೆ. ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದವರಿಗೆಲ್ಲ ತಕ್ಕ ಉತ್ತರ ನೀಡಿದ್ದಾರೆ. ಇಡೀ ಚಾನಲ್'ಗಳ ಜಾಹೀರಾತು ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳು ಗೋಚರವಾಗಿದೆ.ಆರಂಭಗೊಂಡ ಮೊದಲ ದಿನದಲ್ಲಿ ಲಾಲು- ಶಹಬುದ್ದೀನ್ ಸ್ಟಿಂಗ್, ಐಸಿಸ್ ಉಗ್ರರ ಸ್ಟಿಂಗ್ ಸೇರಿದಂತೆ ಹಲವು ಸ್ಫೋಟಕ ವರದಿಗಳನ್ನು ರಿಪಬ್ಕಿಕ್ ಟಿವಿ ವರದಿ ಮಾಡಿತ್ತು.

ವೀಕ್ಷಕರ ಸಮೀಕ್ಷಾ ಮಂಡಳಿ 'ಬ್ರಾಡ್ಕಾಸ್ಟ್ಆಡಿಯನ್ಸ್ರಿಸರ್ಚ್ಕೌನ್ಸಿಲ್'ಕಳೆದ ಒಂದು ವಾರದ ಅಂಕಿಅಂಶಗಳನ್ನು ನೀಡಿದ್ದು, ಇದರನ್ವಯ ಮೇ 12ರವರೆಗೆರಿಪಬ್ಲಿಕ್ಟಿವಿ 2.11 ಮಿಲಿಯನ್ಇಂಪ್ರೆಷನ್ಅಥವಾಟೆವಿವಿಷನ್ವ್ಯೂವರ್ಶಿಪ್ಇನ್ಥೌಸೆಂಡ್ (ಟಿವಿಟಿ) ಗಳನ್ನುಪಡೆದಿದೆ. ಅಲ್ಲದೆ ದೇಶದ ಪ್ರಮುಖ ಸುದ್ದಿ ವಾಹಿನಿಯೆನಿಸಿಕೊಂಡಿರುವ 'ಟೈಮ್ಸ್ನೌ'ಅನ್ನು ಹಿಂದಿಕ್ಕಿ ಶೇ.84.4ರಷ್ಟುಹೆಚ್ಚಿನಮುನ್ನಡೆಪಡೆದಿದೆ. ಹಲವು ವರ್ಷಗಳ ಕಾಲ ಮೊದಲಸ್ಥಾನ ಅಲಂಕರಿಸಿದ್ದ ಟೈಮ್ಸ್'ನೌ ರಿಪಬ್ಲಿಕ್ ಬಂದ ಆರಂಭಗೊಂಡ ಮೊದಲ ವಾರದಲ್ಲಿ 1.14 ಮಿಲಿಯನ್ವೀಕ್ಷಣೆಯೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.

ಮೊದಲ ಯಶಸ್ಸಿನ ಸಂತಸಕ್ಕೆ ಸಂಸ್ಥಾಪಕ ಸಂಪಾದಕ ಅರ್ನಾಬ್ಗೋಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಹೀಗೆ,

ರಿಪಬ್ಲಿಕ್ಟಿವಿಕೇವಲಒಂದೇವಾರದಲ್ಲೇನಿರೀಕ್ಷೆಗೂ ಮೀರಿದಅತೀ ದೊಡ್ಡಮಟ್ಟದಯಶಸ್ಸಿನವೀಕ್ಷಣೆಯನ್ನುಗಳಿಸಿದೆ. ಜನರು ವಿಶ್ವಾಸಾರ್ಹ ಸುದ್ದಿಗಳನ್ನು ನೋಡುತ್ತಾರೆ ಎಂಬ ನಂಬಿಕೆ ನಿಜವಾಗಿದೆ. ರಿಪಬ್ಲಿಕ್ ಟೀವಿ'ಯನ್ನುದೇಶದ ಮೊದಲ ಸ್ಥಾನಕ್ಕೆ ತಲುಪಿಸಿದ ಸಾರ್ವಜನಿಕರಿಗೆ ನಾನು ಕೃತಜ್ಞನಾಗಿದ್ದೇನೆ.' ಎಂದು ತಮ್ಮ ಸಂದೇಶ ತಿಳಿಸಿದ್ದಾರೆ.