ಸೇನಾಧಿಕಾರಿಗಳ ಬಡ್ತಿಯಲ್ಲಿ ತಾರತಮ್ಯ ಮತ್ತು ಅನ್ಯಾಯ ನಡೆದಿದೆ ಎಂದು ಆಪಾದಿಸಿ 100ಕ್ಕೂ ಅಧಿಕ ಲೆಫ್ಟಿನೆಂಟ್ ಕರ್ನಲ್’ಗಳು ಮತ್ತು ಮೇಜರ್‌ಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ನವದೆಹಲಿ: ಸೇನಾಧಿಕಾರಿಗಳ ಬಡ್ತಿಯಲ್ಲಿ ತಾರತಮ್ಯ ಮತ್ತು ಅನ್ಯಾಯ ನಡೆದಿದೆ ಎಂದು ಆಪಾದಿಸಿ 100ಕ್ಕೂ ಅಧಿಕ ಲೆಫ್ಟಿನೆಂಟ್ ಕರ್ನಲ್’ಗಳು ಮತ್ತು ಮೇಜರ್‌ಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬಡ್ತಿಯಲ್ಲಿ ತಾರತಮ್ಯ ಎಸಗಿರುವ ಸೇನೆ ಮತ್ತು ಕೇಂದ್ರ ಸರ್ಕಾರದ ವರ್ತನೆ ತೀವ್ರ ಅನ್ಯಾಯದ್ದಾಗಿದೆ ಮತ್ತು ಇದು ಅಧಿಕಾರಿಗಳ ನೈತಿಕತೆಗೆ ಹಾನಿಯನ್ನುಂಟು ಮಾಡುವಂತದ್ದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಬಡ್ತಿಯಲ್ಲಿ ಸಮಾನತೆ ಕಾಪಾಡದೇ ಇದ್ದಲ್ಲಿ ತಮ್ಮನ್ನು ಮುಂಚೂಣಿ ನೆಲೆಗೆ ನಿಯೋಜಿಸಬಾರದು ಎಂದು ಯೋಧರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

(ಸಾಂದರ್ಭಿಕ ಚಿತ್ರ)