ಕಾಶ್ಮೀರದಲ್ಲಿ ಕಲ್ಲು ತೂರುವವನನ್ನು ಪೊಲೀಸ್ ಜೀಪ್’ಗೆ ಕಟ್ಟುವ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಕಟ್ಟಿ ಎನ್ನುವ ಮೂಲಕ ಬಾಲಿವುಡ್ ನಟ, ಬಿಜೆಪಿ ಸಂಸದ ಪರೇಶ್ ರಾವಲ್ ಟ್ವೀಟಿಸಿದ್ದು ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ನವದೆಹಲಿ (ಮೇ.23): ಕಾಶ್ಮೀರದಲ್ಲಿ ಕಲ್ಲು ತೂರುವವನನ್ನು ಪೊಲೀಸ್ ಜೀಪ್’ಗೆ ಕಟ್ಟುವ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಕಟ್ಟಿ ಎನ್ನುವ ಮೂಲಕ ಬಾಲಿವುಡ್ ನಟ, ಬಿಜೆಪಿ ಸಂಸದ ಪರೇಶ್ ರಾವಲ್ ಟ್ವೀಟಿಸಿದ್ದು ವ್ಯಾಪಕ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಎಪ್ಪತ್ತು ಲಕ್ಷ ಯೋಧರಿಂದ ಕಾಶ್ಮೀರದ ಚಿತ್ರಣ ಬದಲಿಸಲು ಸಾಧ್ಯವಿಲ್ಲ ಎಂದು ಅರುಂಧತಿ ರಾಯ್ ಹೇಳಿಕೆ ಹಿನ್ನೆಲೆಯಲ್ಲಿ ಪರೇಶ್ ರಾವಲ್ ಕಿಡಿಕಾರಿದ್ದಾರೆ. ಇನ್ನು ಮುಂದುವರೆದು ಆಕೆಯ ಜನನ ಪ್ರಮಾಣ ಪತ್ರವು ಹೆರಿಗೆ ವಾರ್ಡ್ ನೀಡಿದ ಪಶ್ಚಾತ್ತಾಪದ ಪತ್ರ ಎಂದು ವ್ಯಂಗ್ಯವಾಡಿದ್ದಾರೆ.

ಕಳೆದ ತಿಂಗಳು ಸೇನೆಯ ಮೇಲೆ ಕಲ್ಲು ತೂರಾಟ ಮಾಡಿದವನೊಬ್ಬನನ್ನು ಸೇನಾ ಸಿಬ್ಬಂದಿ ಜೀಪ್ ಎದುರು ಕಟ್ಟಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿ ವಿವಾದಕ್ಕೆ ಎಡೆಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಅರುಂಧತಿ ರಾಯ್ ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ಪರೇಶ್ ರಾವಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾವಲ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪಿಡಿಪಿ-ಬಿಜೆಪಿ ಮೈತ್ರಿಗೆ ಕಾರಣನಾದ ವ್ಯಕ್ತಿಯನ್ನೇಕೆ ಕಟ್ಟಬಾರದು ಎಂದು ಪ್ರಶ್ನಿಸಿದ್ದಾರೆ.