ಪುಲ್ವಾಮದಲ್ಲಿ ಎನ್ಕೌಂಟರ್ ನಡೆದು 5 ಸಿಆರ್’ಪಿಎಫ್ ಸಿಬ್ಬಂದಿ ಹುತಾತ್ಮರಾದ ಬೆನ್ನಲ್ಲೇ ಬಿಜೆಪಿ ಸಂಸದರೋರ್ವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ನವದೆಹಲಿ (ಜ.2): ಪುಲ್ವಾಮದಲ್ಲಿ ಎನ್ಕೌಂಟರ್ ನಡೆದು 5 ಸಿಆರ್’ಪಿಎಫ್ ಸಿಬ್ಬಂದಿ ಹುತಾತ್ಮರಾದ ಬೆನ್ನಲ್ಲೇ ಬಿಜೆಪಿ ಸಂಸದರೋರ್ವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಸೈನಿಕರು ಸಾಯದಿರುವ ದೇಶ ಯಾವುದಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲಾ ದೇಶಗಳಲ್ಲಿಯೂ ಕೂಡ ಸೈನಿಕರು ಸಾಯುತ್ತಾರೆ. ಇದು ಪ್ರತಿನಿತ್ಯ ನಡೆಯುವ ಘಟನೆ ಎಂದು ಬಿಜೆಪಿ ಎಂಪಿ ನೇಪಾಳ್ ಸಿಂಗ್ ಹೇಳಿದ್ದಾರೆ.

ಇಂತಹ ಘಟನೆಗಳು ನಡೆದಾಗ ಗಾಯಗಳಾಗುತ್ತದೆ.. ಅಲ್ಲದೇ ಯಾವುದಾದರೂ ಜೀವವನ್ನು ರಕ್ಷಣೆ ಮಾಡುವಂತಹ ಆಯುಧ ಇದೆಯೇ, ಬುಲೆಟ್’ಗಳನ್ನು ತಡೆಯುವ ಸಾಮರ್ಥ್ಯ ಇರುವಂತದ್ದು ಇದೆಯಾ ಎಂದಿದ್ದಾರೆ.

 ಹೇಳಿಕೆ ವಿವಾದಕ್ಕೆ ಒಳಗಾಗುತ್ತಿದ್ದಂತೆ ತಮ್ಮ ಹೇಳಿಕೆ ಬಗ್ಗೆ ಅವರು ಕ್ಷಮೆ ಯಾಚಿಸಿದ್ದಾರೆ.