ಪ್ರಸಕ್ತ ವರ್ಷವೊಂದರಲ್ಲೇ ಪಾಕಿಸ್ತಾನವೂ 780 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಈ ಗುಂಡಿನ ಚಕಮಕಿಯಲ್ಲಿ 12 ಮಂದಿ ನಾಗರೀಕರು ಸೇರಿದಂತೆ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.
ಶ್ರೀನಗರ(ಡಿ.23): ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆಯಾಗಿದ್ದು, ಕಾಶ್ಮೀರದಲ್ಲಿ ನಡೆದ ಗುಂಡಿನ ಮೊರೆತಕ್ಕೆ ಭಾರತೀಯ ಸೇನೆಯ ಓರ್ವ ಮೇಜರ್ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕೇರಿ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ನಡೆದ ಪಾಕಿಸ್ತಾನಿ ಸೈನಿಕರಿಂದ ನಡೆದ ಅಪ್ರಚೋದಿತ ಗುಂಡಿನ ದಾಳಿಗೆ ಮೇಜರ್ ಮೋಹರ್ಕರ್ ಪ್ರಫುಲ್ಲ ಅಂಬಾದಾಸ್, ಲ್ಯಾನ್ಸ್ ನಾಯ್ಕ್ ಗುರ್ಮೇಲ್ ಸಿಂಗ್, ಸಿಪಾಯಿ ಪರ್ಗತ್ ಸಿಂಗ್ ಗಂಭೀರ ಗಾಯಗೊಂಡು ಬಳಿಕ ಕೊನೆಯುಸಿರೆಳೆದರು. ಆದರೆ ಸೇನಾ ಮೂಲಗಳ ಪ್ರಕಾರ, ನಾಲ್ವರು ಸೇನಾ ಸಿಬ್ಬಂದಿ ಮೃತರಾಗಿದ್ದಾರೆ ಎನ್ನಲಾಗಿದೆ. ಇತರ ಇಬ್ಬರು ಸಿಬ್ಬಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.
ಮೇಜರ್ ಅಂಬಾದಾಸ್ ಮಹಾರಾಷ್ಟ್ರದ ಭಂಡಾರ ಜಿಲ್ಲೆಯವರಾದರೆ, ಲ್ಯಾನ್ಸ್ ಗುರ್ಮೇಲ್ ಸಿಂಗ್ ಪಂಜಾಬ್'ನ ಅಮೃತಸರದವರು,ಇನ್ನು ಸಿಪಾಯಿ ಪರ್ಗತ್ ಸಿಂಗ್ ಹರ್ಯಾಣದ ಕರ್ನಲ್ ಜಿಲ್ಲೆಯವರು.
ಪ್ರಸಕ್ತ ವರ್ಷವೊಂದರಲ್ಲೇ ಪಾಕಿಸ್ತಾನವೂ 780 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಈ ಗುಂಡಿನ ಚಕಮಕಿಯಲ್ಲಿ 12 ಮಂದಿ ನಾಗರೀಕರು ಸೇರಿದಂತೆ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.