Asianet Suvarna News Asianet Suvarna News

(ವಿಡಿಯೋ)ಇದೇನಾ ಡಿಜಿಟಲ್ ಇಂಡಿಯಾ? ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲವೆಂದು ಮರ ಹತ್ತಿದ ಮೋದಿ ಸಂಪುಟದ ಸಚಿವ!

ಡಿಜಿಟಲ್ ಇಂಡಿಯಾ ಪ್ರತಿ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಆದರೆ ಈ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಹಿಂದಿನ ವಾಸ್ತವತೆ ಏನು ಎಂಬುವುದನ್ನು ಮೋದಿ ಸಂಪುಟದಲ್ಲಿ ಕೇಂದ್ರದ ಹಣಕಾಸು ಖಾತೆಯ ರಾಜ್ಯ ಸಚಿವರಾಗಿರುವ ಅರ್ಜುನ್ ಮೇಘವಾಲ್ ತನ್ನ ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ

arjun meghwal climbs on tree to get phone signal

ರಾಜಸ್ಥಾನ(ಜೂ.05): ಡಿಜಿಟಲ್ ಇಂಡಿಯಾ ಪ್ರತಿ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಆದರೆ ಈ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಹಿಂದಿನ ವಾಸ್ತವತೆ ಏನು ಎಂಬುವುದನ್ನು ಮೋದಿ ಸಂಪುಟದಲ್ಲಿ ಕೇಂದ್ರದ ಹಣಕಾಸು ಖಾತೆಯ ರಾಜ್ಯ ಸಚಿವರಾಗಿರುವ ಅರ್ಜುನ್ ಮೇಘವಾಲ್ ತನ್ನ ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ

ಸಚಿವ ಅರ್ಜುನ್ ಮೇಘವಾಲ್ ಬಿಕನೇರ್'ನ ಡೋಲಿಯಾ ಎಂಬ ಹಳ್ಳಿಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಲ್ಲಿನ ಜನರು ತಮ್ಮ ಊರಿನ ಆಸ್ಪತ್ರೆಯಲ್ಲಿ ನರ್ಸ್ ಇಲ್ಲ ಎಂದು ದೂರು ನೀಡಿದ್ದರು. ಈ ದೂರನ್ನು ಆಲಿಸಿದ ಮಂತ್ರಿ ಆ ಕೂಡಲೇ ತನ್ನ ಮೊಬೈಲ್ ಹೊರತೆಗೆದು ಬಿಕನೇರ್'ನ ಮುಖ್ಯ ವೈಧ್ಯಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು ಆದರೆ ನೆಟ್ವರ್ರ್ಕ್ ಇಲ್ಲದಿರುವುದರಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಈ ವೇಳೆ ಹಳ್ಳಿಯ ಜನರು ಅಲ್ಲಿದ್ದ ಮರವೊಂದನ್ನು ತೋರಿಸಿ ಆ ಮರ ಹತ್ತಿದರೆ ನೆಟ್ವರ್ಕ್ ಸಿಗುತ್ತದೆ ಎಂದಿದ್ದಾರೆ. ಹೀಗಾಗಿ ಮಂತ್ರಿಗಾಗಿ ಮರ ಏರಲು ಏಣಿಯನ್ನೂ ತರಿಸಿ, ಮರಕ್ಕೆ ಒರಗಿಸಿ ನಿಲ್ಲಿಸಿದ್ದೂ ಆಯಿತು. ಮರುಕ್ಷಣವೇ ಮರ ಹತ್ತಿದ ಅರ್ಜುನ್ ಮೇಘವಾಲ್ ವೈಧ್ಯಾಧಿಕಾರಿಗೆ ಕರೆ ಮಾಡಿ ಆಸ್ಪತ್ರೆಗೆ ನರ್ಸ್ ನೇಮಿಸುವಂತೆ ಆದೇಶಿಸಿದ್ದಾರೆ. ಈ ಘಟನೆಯಿಂದ ಡಿಜಿಟಲ್ ಇಂಡಿಯಾ ಕುರಿತಾಗಿ ಅದೆಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ, ಕೆಲ ಸ್ಥಳಗಳಲ್ಲಿ ಎತ್ತರದ ಮರ ಹತ್ತದೇ ಸಿಗ್ನಲ್ ಸಿಗುವುದು ಕಷ್ಟ ಎಂಬುವುದು ಸಾಬೀತಾಗುತ್ತದೆ.

 

 

 

 

 

 

 

 

 

 

 

ಇನ್ನು ಈ ಅರ್ಜುನ್ ಮೇಘವಾಲ್ ಯಾರು ಎಂಬುವುದು ತಿಳಿಯದಿದ್ದರೆ, ಜನರಿಗೆ ಪರಿಸರದ ಮೇಲೆ ಅರಿವಿ ಮೂಡಿಸುವ ಸಲುವಾಗಿ ಸೈಕಲ್ ಏರಿ ಫೇಮಸ್ ಆದ ಮಂತ್ರಿಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಅಂದು ಫೇಮಸ್ ಆದ ವ್ಯಕ್ತಿಯೇ ಅರ್ಜುನ್ ಮೇಘವಾಲ್ ಆಗಿದ್ದಾರೆ. ಪರಿಸರದ ಮೇಲೆ ಅಪಾರ ಕಾಳಜಿ ಇರುವ ಅರ್ಜುನ್ ಹಲವಾರು ಬಾರಿ ಸೈಕಲ್'ನಲ್ಲೇ ಪ್ರಯಾಣಿಸುತ್ತಾರೆ.

 

Follow Us:
Download App:
  • android
  • ios