ಇಂಧನ ಖಾತೆ ಬಗ್ಗೆ ನೀನು ಮಾತನಾಡಬೇಡ, ನಾನು ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಲು ಬಂದಿದ್ದೇನೆ. ನಿನ್ನ ಜೊತೆ ಮಾತನಾಡಲು ನಾನು ಬಂದಿಲ್ಲ ಎಂದು ಏಕ ವಚನದಲ್ಲಿ ರೇಗಿದ್ದಾರೆ ಎನ್ನಲಾಗಿದೆ. 

ಬೆಂಗಳೂರು(ಮೇ.31): ಮೈತ್ರಿ ಸರ್ಕಾರದ ಪ್ರಮುಖ ನಾಯಕರಾದ H.D.ರೇವಣ್ಣ-D.K.ಶಿವಕುಮಾರ್ ಅವರ ನಡುವೆ ಇಂಧನ ಖಾತೆ ಬಗ್ಗೆ ಮಾತಿನ ಚಕಮಕಿ ನಡೆದಿದೆ. 
ಇಂಧನ ಇಲಾಖೆಗೆ ಪಟ್ಟು ಹಿಡಿದಿರುವ H.D.ರೇವಣ್ಣ-D.K.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮುಂದೆಯೇ ವಾಕ್ ಸಮರ ನಡೆಸಿದರು. ಇಂಧನ ಖಾತೆ ಬಗ್ಗೆ ನೀನು ಮಾತನಾಡಬೇಡ, ನಾನು ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಲು ಬಂದಿದ್ದೇನೆ. ನಿನ್ನ ಜೊತೆ ಮಾತನಾಡಲು ನಾನು ಬಂದಿಲ್ಲ ಎಂದು ಏಕ ವಚನದಲ್ಲಿ ರೇಗಿದ್ದಾರೆ ಎನ್ನಲಾಗಿದೆ. 
ಇಬ್ಬರನ್ನು ಸಮಾಧಾನ ಪಡಿಸಿದ ವೇಣುಗೋಪಾಲ್ ಖಾತೆ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೇ ಈ ಬಗ್ಗೆ ಸಿಎಂ ಮತ್ತು JDS ವರಿಷ್ಠ ದೇವೇಗೌಡರಿಗೆ ಮಾಹಿತಿ ನೀಡುತ್ತೇವೆ ಎಂದು ಮಾಧ್ಯಮದವರಿಗೆ ತಿಳಿಸಿದರೆನ್ನಲಾಗಿದೆ.

[ಸಾಂದರ್ಭಿಕ ಚಿತ್ರ]