ಅಮ್ಮ, ಚಿನ್ನಮ್ಮನ ಅಣತಿಯಂತೆ ನಡೆಯುತ್ತಿದ್ದ ಪನ್ನೀರ್ ಸೆಲ್ವಂ  ಏಕಾಏಕಿ ಶಶಿಕಲಾ ವಿರುದ್ಧ ಸಿಡಿದೇಳಲು ಇಷ್ಟೊಂದು ಬಲ ಎಲ್ಲಿಂದ ಬಂತು?

ಚೆನ್ನೈ (ಫೆ.16): ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ರಾಜಕೀಯ ಜಿದ್ದಾಜಿದ್ದಿನಲ್ಲಿ ಈಗ ಶಶಿಕಲಾ ಜೈಲು ಸೇರುವ ಮೂಲಕ ಒಂದು ಹಂತಕ್ಕೆ ಬ್ರೇಕ್ ಬಿದ್ದಿದೆ.

ಪನ್ನೀರ್ ಸೆಲ್ವಂ ಒಂದು ಕೈ ಮೇಲಾಗಿದೆ. ಆದರೆ ಅಮ್ಮ, ಚಿನ್ನಮ್ಮನ ಅಣತಿಯಂತೆ ನಡೆಯುತ್ತಿದ್ದ ಪನ್ನೀರ್ ಸೆಲ್ವಂ ಏಕಾಏಕಿ ಶಶಿಕಲಾ ವಿರುದ್ಧ ಸಿಡಿದೇಳಲು ಇಷ್ಟೊಂದು ಬಲ ಎಲ್ಲಿಂದ ಬಂತು ಎಂಬ ಪ್ರಶ್ನೆ ಎದುರಾಗಿತ್ತು.

ಈಗಿನ ಮಾಹಿತಿ ಪ್ರಕಾರ ಪನ್ನೀರ್ ಸೆಲ್ವಂ ಹಿಂದೆ ಇಬ್ಬರು ಕೇಂದ್ರ ಸಚಿವರಿದ್ದಾರೆ ಎನ್ನಲಾಗ್ತಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ವೆಂಕಯ್ಯ ನಾಯ್ಡು ತಮಿಳುನಾಡು ರಾಜಕೀಯ ಬಿಕ್ಕಟ್ಟಿನಲ್ಲಿ ಮೂಗು ತೋರಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.