ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸೌದಿ ಅರೇಬಿಯಾದ ಬಹುತೇಕ ಸುದ್ದಿಗಳು ಹಿಂಸೆ, ಜಗಳ, ಕ್ರೂರತೆಗೆ ಸಂಬಂಧಿಸಿದ ವಿಚಾರಗಳೇ ಆಗಿರುತ್ತವೆ. ಆದರೆ ಈ ಬಾರಿ ತಂದೆ, ಮಗಳ ಮಾತುಕತೆಯನ್ನೊಳಗೊಂಡ ಸುದ್ದಿಯೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಹೃದಯ ಮುಟ್ಟುವಂತಿದೆ. ಅಂತದ್ದೇನು ಸುದ್ದಿ ಅಂತೀರಾ? ಇಲ್ಲಿದೆ ವಿವರ
ನವದೆಹಲಿ(ಎ.22): ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸೌದಿ ಅರೇಬಿಯಾದ ಬಹುತೇಕ ಸುದ್ದಿಗಳು ಹಿಂಸೆ, ಜಗಳ, ಕ್ರೂರತೆಗೆ ಸಂಬಂಧಿಸಿದ ವಿಚಾರಗಳೇ ಆಗಿರುತ್ತವೆ. ಆದರೆ ಈ ಬಾರಿ ತಂದೆ, ಮಗಳ ಮಾತುಕತೆಯನ್ನೊಳಗೊಂಡ ಸುದ್ದಿಯೊಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಹೃದಯ ಮುಟ್ಟುವಂತಿದೆ. ಅಂತದ್ದೇನು ಸುದ್ದಿ ಅಂತೀರಾ? ಇಲ್ಲಿದೆ ವಿವರ
ಮೂಲತಃ ಸೌದಿ ಅರೇಬಿಯದವಳಾದ ಮುಸ್ಲಿಂ ಯುವತಿ ಲಾಮಯಾ ಸದ್ಯ ಅಮೆರಿಕಾದಲ್ಲಿ ತನ್ನ ಶಿಕ್ಷಣ ಮಾಡುತ್ತಿದ್ದಾಳೆ. ಆದರೆ ಆಕೆಯ ತಂದೆ ಇನ್ನೂ ಸೌದಿ ಅರೇಬಿಯಾದಲ್ಲೇ ಇದ್ದಾರೆ. ಸೌದಿಯಲ್ಲಿ ಯುವತಿಯರು ಹಿಜಾಬ್ ಧರಿಸುವುದು ಕಡ್ಡಾಯ ಇದು ಅಲ್ಲಿನ ಸಂಸ್ಕೃತಿ ಆದರೆ ಅಮೆರಿಕಾದಲ್ಲಿ ಇದು ಕಡ್ಡಾಯವಲ್ಲ. ಹೀಗಿರುವಾಗ ತಾನು ಹಿಜಾಬ್ ಧರಿಸಬೇಕೋ ಬೇಡವೋ ಎಂಬ ಗೊಂದಲ ಲಾಯಮಾಳನ್ನೂ ಕಾಡಿದೆ. ಏನು ಮಾಡಬೇಕೆಂದು ತೋಚದ ಆಕೆ ತಂದೆಯ ಬಳಿ ನೇರವಾಗಿ 'ಅಪ್ಪಾ, ನಾನು ಹಿಜಾಬ್ ಧರಿಸುವುದನ್ನು ನಿಲ್ಲಿಸಬಹುದೇ?' ಎಂದು ಪ್ರಶ್ನಿಸಿದ್ದಾಳೆ.
ಮಗಳ ಈ ಪ್ರಶ್ನೆಗೆ ತಂದೆ ನೀಡಿದ ಉತ್ತರ ಈಗ ವೈರಲ್ ಆಗಿದೆ. ಕೆಲವರು ತಂದೆ ಮಗಳಿಗೆ ನೀಡಿದ ಈ ಉತ್ತರ ಸೌದಿ ಅರೇಬಿಯಾದಲ್ಲೂ ಬದಲಾವಣೆ ಆಗುತ್ತಿದೆ ಎಂಬ ನಿಟ್ಟಿನಲ್ಲಿ ಸ್ವೀಕರಿಸಿದ್ದಾರೆ. ಮುದ್ದಿನ ಮಗಳಿಗೆ ಉತ್ತರಿಸಿದ ತಂದೆ 'ನನ್ನ ಮುದ್ದಿನ ಮಗಳೇ ಈ ಪ್ರಶ್ನೆಗೆ ಉತ್ತರಿಸಬೇಕಾಗಿರುವುದು ನಾನಲ್ಲ. ನಾನು ಮಾತ್ರ ಅಲ್ಲ, ಯಾವೊಬ್ಬ ಪುರುಷನೂ ಈ ಕುರಿತಾಗಿ ನಿರ್ಧರಿಸಲು ಸಾಧ್ಯವಿಲ್ಲ. ನಿನಗೆ ಸರಿ ಎನಿಸಿದರೆ ನೀನು ಧರಿಸು, ಇಲ್ಲವೆಂದಾದಲ್ಲಿ ಧರಿಸಬೇಡ. ನಿನ್ನ ಪ್ರತಿಯೊಂದು ನಿರ್ಧಾರದಲ್ಲೂ ನಾನು ನಿನ್ನೆ ಜೊತೆಗಿದ್ದೇನೆ'. ಎಂದಿದ್ದಾರೆ.
ಇನ್ನು ಲಮಯಾ ಅಮೆರಿಕಾ ಅಧ್ಯಕ್ಷರು ಕೆಲ ದಿನಗಳ ಹಿಂದೆ ತೆಗೆದುಕೊಂಡ ನಿರ್ಧಾರ(7 ಮುಸ್ಲಿಂ ದೇಶಗಳ ನಾಗರಿಕರಿಗೆ ಅಮೆರಿಕಾ ಪ್ರವೇಶ ರದ್ದು)ದ ವಿರುದ್ಧ ಸಿಡಿದೆದ್ದು, ತಮ್ಮದೇ ಗುಂಪು ಕಟ್ಟಿಕೊಂಡವರಲ್ಲಿ ಇದ್ದಾಳೆಂದು ವಾಹಿಯೊಂದು ವರದಿ ಮಾಡಿದೆ. ಇದರ ಪರಿಣಾಮವಾಗಿಯೇ ಮೇಲಿನ ುತ್ತರ ನೀಡಿದ ತಂದೆ ಮರುಕ್ಷಣವೇ 'ಪರಿಸ್ಥಿತಿ ಸರಿಯಾಗಿದೆಯಲ್ಲವೇ? ಯಾವುದಾದರೂ ಸಮಸ್ಯೆ ಎದುರಾಗಿದೆಯಾ? ಎಂದು ಕೇಳಿದ್ದಾರೆ. ಅದೇನಿದ್ದರೂ ಸದ್ಯ ಈ ಮನಗೆಲ್ಲುವ ಉತ್ತರ ಟ್ವಿಟರ್'ನಲ್ಲಿ ವೈರಲ್ ಆಗಿದ್ದು, ಲಾಯಮಾಳ ತಂದೆಯ ಉತ್ತರಕ್ಕೆ ಹಲವಾರು ಪ್ರಶಂಸೆಗಳು ವ್ಯಕ್ತವಾಗಿವೆ.
ಅದೇನಿದ್ದರೂ ಮಗಳೊಬ್ಬಳಿಗೆ ತಂದೆಯಿಂದ ಈ ಮಟ್ಟದ ಬೆಂಬಲ ಸಿಕ್ಕರೆ, ಪ್ರತಿಯೊಬ್ಬ ಯುವತಿಯೂ ಸಮಾಜಕ್ಕೆ ಹೆದರದೆ ಧೈರ್ಯದಿಂದ ಮುನ್ನಡೆಯುವಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ ಈ ಸುದ್ದಿ ತಂದೆಗೆ ಮಗಳ ಮೇಲಿರುವ ಅಭಿಮಾನ, ಪ್ರೀತಿಯನ್ನು ಎತ್ತಿ ತೋರಿಸುತ್ತದೆ.
