ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿಕೊಳ್ಳಲು ಏ. 14 ರವರೆಗೂ ಅವಕಾಶ

First Published 27, Mar 2018, 3:22 PM IST
April 14 deadline to Voter List
Highlights

ನಾಮಪತ್ರ ಸಲ್ಲಿಕೆಗೆ 10  ದಿನ ಮೊದಲಿನವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.  ಏಪ್ರಿಲ್ 14 ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಚುನಾವಣಾ ಆಯೋಗದ ಮಾಹಿತಿ ನೀಡಿದೆ. 

ಬೆಂಗಳೂರು (ಮಾ. 27): ನಾಮಪತ್ರ ಸಲ್ಲಿಕೆಗೆ 10  ದಿನ ಮೊದಲಿನವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.  ಏಪ್ರಿಲ್ 14 ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಚುನಾವಣಾ ಆಯೋಗದ ಮಾಹಿತಿ ನೀಡಿದೆ. 

ಮೇ. 12 ರಂದು ಚುನಾವಣೆ ನಡೆಯಲಿದ್ದು, ಮೇ. 15 ರಂದು ಮತ ಎಣಿಕೆ ನಡೆಯಲಿದೆ. ಪಾರದರ್ಶಕ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ.  ಇನ್ನೂ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸದೇ ಇದ್ದವರು ಬೇಗ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಆಯೋಗ ತಿಳಿಸಿದೆ. 

loader