ಬೆಂಗಳೂರಿನ 2 ವಿವಿಗಳಿಗೆ ಕುಲಪತಿಗಳ ನೇಮಕ
ಬೆಂಗಳೂರು(ಜು.25):ರಾಜ್ಯ ಸರ್ಕಾರ ಬೆಂಗಳೂರಿನ 2 ವಿವಿಗಳಿಗೆ ಕುಲಪತಿಗಳನ್ನು ನೇಮಿಸಿದೆ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ನ್ಯಾಷನಲ್ ಲಾ ಸ್ಕೂಲ್ ಮತ್ತು ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್.ಜಾಫೆಟ್ ಹಾಗೂ ಉತ್ತರ ವಿವಿಗೆ ಅದೇ ವಿವಿಯ ವಿಶೇಷಾಧಿಕಾರಿಯಾದ ಟಿ.ಡಿ.ಕೆಂಪರಾಜು ಅವರನ್ನು ಕುಲಪತಿಗಳನ್ನಾಗಿ ನೇಮಿಸಲಾಗಿದೆ.
