ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕ್, ಸೋಲ್ಜರ್ ಟ್ರೇಡ್‌ಮನ್ ಹುದ್ದೆಗಳಿಗಾಗಿ 2018ರ ಜನವರಿ 16 ರಿಂದ 21ರವರಗೆ ರ್ಯಾಲಿ ನಡೆಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅಂತರ್ಜಾಲ ತಾಣ www.joinindianarmy.nic.in ನಲ್ಲಿ ಡಿ. 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಶಿವಮೊಗ್ಗ(ಡಿ.01): ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಆರ್ಮಿ ರಿಕ್ರೂಟಿಂಗ್ ಝೋನ್ ಇವರು ಬಾಗಲಕೋಟೆ ಜಿಲ್ಲಾ ಸ್ಟೇಡಿಯಂನಲ್ಲಿ ಆರ್ಮಿ ಭರ್ತಿ ರ್ಯಾಲಿ ಆಯೋಜಿಸಿದ್ದು, ಶಿವಮೊಗ್ಗ, ಮತ್ತು ದಾವಣಗೆರೆ ಜಿಲ್ಲೆಗಳ ಆಸಕ್ತ ಅವಿವಾಹಿತ ಯುವಕ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕ್, ಸೋಲ್ಜರ್ ಟ್ರೇಡ್ಮನ್ ಹುದ್ದೆಗಳಿಗಾಗಿ 2018ರ ಜನವರಿ 16 ರಿಂದ 21ರವರಗೆ ರ್ಯಾಲಿ ನಡೆಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅಂತರ್ಜಾಲ ತಾಣ www.joinindianarmy.nic.in ನಲ್ಲಿ ಡಿ. 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಆಕರ್ಷಕ ವೇತನ ಹಾಗೂ ಇತರೆ ಭತ್ಯೆಗಳ ಅತಿ ಹೆಚ್ಚಿನ ಸೌಕರ್ಯವಿದ್ದು, ಯುವಕರು ಈ ರ್ಯಾಲಿಯ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ದೂ.ಸಂ.: 08182-220925 ಸಂಪರ್ಕಿಸುವುದು.
