Asianet Suvarna News Asianet Suvarna News

ಅಯೋಧ್ಯೆ : ಇಂದಿನಿಂದ ಸುಪ್ರೀಂ ವಿಚಾರಣೆ

ಅಯೋಧ್ಯಾ ವಿವಾದ ಇಂದು ವಿಚಾರಣೆ ಸಾಧ್ಯತೆ | ಕುತೂಹಲ ಮೂಡಿಸಿದೆ ಸುಪ್ರೀಂಕೋರ್ಟ್ ತೀರ್ಪು 

Apex court may hear petitions against Ayodhya high court verdict
Author
Bengaluru, First Published Oct 29, 2018, 11:20 AM IST

ನವದೆಹಲಿ (ಅ. 29): ಅಯೋಧ್ಯೆರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಇಂದು ವಿಚಾರಣೆ ನಡೆಸುವ ನಿರೀಕ್ಷೆಯಿದೆ.

2010 ರಲ್ಲಿ ಅಲಹಾಬಾದ್ ಹೈಕೋರ್ಟ್ ರಾಮಜನ್ಮಭೂಮಿಯನ್ನು 3 ಭಾಗಗಳಾಗಿ ಹಂಚಿತ್ತು. ಇದನ್ನು ಪ್ರಶ್ನಿಸಿ ವಿವಿಧ ವರ್ಗಗಳ ಕಕ್ಷಿದಾರರು ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್ ಗೊಗೋಯ್, ನ್ಯಾ| ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾ| ಕೆ.ಎಂ. ಜೋಸೆಫ್ ಅವರ ತ್ರಿಸದಸ್ಯ ಪೀಠ ನಡೆಸಲಿದೆ.

2010 ರಲ್ಲಿ ನೀಡಿದ್ದ ತೀರ್ಪಿನಲ್ಲಿ ವಿವಾದಿತ 2.77 ಎಕರೆ ಜಾಗವನ್ನು ಸುನ್ನಿ ವಕ್ಫ್ ಮಮಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್‌ಲಲ್ಲಾಗೆ ಸಮನಾಗಿ ಹಂಚಲಾಗಿತ್ತು.

ಇದಕ್ಕೂ ಮುನ್ನ ಸೆ.27 ರಂದು ‘ ಮಸೀದಿ ಅವಿಭಾಜ್ಯ ಅಂಗವಲ್ಲ’ ಎಂಬ ತನ್ನ ಹಳೆಯ ತೀರ್ಪನ್ನು ಬಾಬ್ರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪುನರುಚ್ಚರಿಸಿತ್ತು. ಅಲ್ಲದೆ ಈ ಕುರಿತ ತೀರ್ಪನ್ನು ೫ ಸದಸ್ಯರ ಸಾಂವಿಧಾನ ಪೀಠಕ್ಕೆ ವರ್ಗಾಯಿಸಲೂ ನಿರಾಕರಿಸಿತ್ತು.


 

Follow Us:
Download App:
  • android
  • ios