ಮುಖ್ಯಮಂತ್ರಿ ಕೆಡವಲು ಅಭಿಪ್ರಾಯ ಕೇಳಿ ನೊಟೀಸ್| ಸಿಎಂ ಮನೆ ಬಾಗಿಲಿಗೆ ನೊಟೀಸ್ ಅಂಟಿಸಿ ಬಂದ ಅಧಿಕಾರಿಗಳು| ಆಂಧ್ರದಲ್ಲಿ ತಾರಕಕ್ಕೇರಿದ ಸಿಎಂ, ಮಾಜಿ ಸಿಎಂ ನಡುವಿನ ಕದನ| ಟಿಡಿಪಿ ಕಚೇರಿ ಪ್ರಜಾ ವೇದಿಕೆ ಕೆಡವಿ ಹಾಕಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ| ನಾಯ್ಡು ಅಧಿಕೃತ ನಿವಾಸದ ಮೇಲೂ ಕಣ್ಣು ಹಾಕಿದ ಆಂಧ್ರ ಸರ್ಕಾರ| ಅಭಿಪ್ರಾಯ ತಿಳಿಸುವಂತೆ ಆಂಧ್ರ ಪ್ರದೇಶದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ನೊಟೀಸ್|
ಅಮರಾವತಿ(ಜೂ.28): ಆಂಧ್ರದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ಜಿದ್ದಾಜಿದ್ದಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೆಲವೇ ದಿನಗಳ ಹಿಂದೆ 8 ಕೋಟಿ ರೂ. ಮೌಲ್ಯದ ಟಿಡಿಪಿ ಕಚೇರಿ ಕೆಡವಿ ಹಾಕಿದ್ದ ಸಿಎಂ ಜಗನ್, ಇದೀಗ ನಾಯ್ಡು ಅವರ ಅಧಿಕೃತ ನಿವಾಸದ ಮೇಲೂ ಕಣ್ಣು ಹಾಕಿದ್ದಾರೆ.
ಮನೆಯನ್ನು ತೆರವುಗೊಳಿಸುವ ಕುರಿತಂತೆ ಅಭಿಪ್ರಾಯ ತಿಳಿಸಿ ಎಂದು ಆಂಧ್ರ ಪ್ರದೇಶದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ಚಂದ್ರಬಾಬು ನಾಯ್ಡು ಅವರಿಗೆ ನೊಟೀಸ್ ನೀಡಿದೆ.
ಈ ಮೂಲಕ ಕಚೇರಿ ಕಳೆದುಕೊಂಡಿದ್ದ ಚಂದ್ರಬಾಬು ನಾಯ್ಡು ಇದೀಗ ತಮ್ಮ ಅಧಿಕೃತ ಮನೆಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಮರಾವತಿ ನಿರ್ಮಾಣದಲ್ಲಿ ಭಾರೀ ಭೂಗಳ್ಳತನ ನಡೆದಿದ್ದು, ಇದಕ್ಕೆ ನಾಯ್ಡು ಸರ್ಕಾರವೇ ನೇರ ಹೊಣೆ ಎಂದು ಪ್ರಸಕ್ತ ಸರ್ಕಾರ ಆರೋಪಿಸುತ್ತಿದೆ.
