ನಿಮ್ಮ ಮೇಲೆ ಹಲ್ಲೆ ಮಾಡಿದರೆ ಮುಲಾಜಿಲ್ಲದೇ ಬಂದೂಕು ಬಳಸಿ: ಪೊಲೀಸರಿಗೆ ಸುನೀಲ್ ಕುಮಾರ್ ಸೂಚನೆ

First Published 20, Jan 2018, 2:57 PM IST
Anybody Attack on use your Pistol Bengaluru Commissioner Sunil Kumar Directs Police officers
Highlights

ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದರೆ ಬಂದೂಕು ಬಳಸಿ ಎಂದು  ಪೊಲೀಸ್ ಸಿಬ್ಬಂದಿಗೆ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶಿಸಿದ್ದಾರೆ.

ಬೆಂಗಳೂರು (ಜ.20): ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದರೆ ಬಂದೂಕು ಬಳಸಿ ಎಂದು  ಪೊಲೀಸ್ ಸಿಬ್ಬಂದಿಗೆ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶಿಸಿದ್ದಾರೆ.

ಪೊಲೀಸರ ಮೇಲೆ ಕೈಎತ್ತುವ ಪುಂಡರ ಬಗ್ಗೆ ಮುಲಾಜೇ ಬೇಡ. ಬಂದೂಕು ಬಳಸಿ  ಎಂದು ಪ್ರತೀ ವಿಭಾಗದ ಡಿಸಿಪಿ ಹಾಗೂ ಇನ್ಸ್ ಪೆಕ್ಟರ್'ಗಳಿಗೆ ಸುನೀಲ್ ಕುಮಾರ್  ಸೂಚನೆ ನೀಡಿದ್ದಾರೆ. ನಿಮಗೆ ಬಂದೂಕು ಕೊಟ್ಟಿರುವುದು ಸುಮ್ಮನೆ ಕೂರುವುದಕ್ಕಲ್ಲ.  ನಿಮ್ಮ ಮೇಲೆ ಹಲ್ಲೆಗೆ ಬಂದ ಪುಂಡರ ಮೇಲೆ ಗುಂಡು ಹಾರಿಸಿ ಎಂದು  ಬೆಂಗಳೂರು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಸುದ್ಧಿಗೋಷ್ಟಿಯಲ್ಲಿಂದು ಹೇಳಿದ್ದಾರೆ.

 

loader