IAS ಅಧಿಕಾರಿ ಮಧ್ಯಪ್ರದೇಶ ಮೂಲದ ಅನುರಾಗ್ ತಿವಾರಿ ಸಾವಿನ ರಹಸ್ಯ ದಿನ ಕಳೆಯುತ್ತಿದ್ದಂತೆ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಬೆಚ್ಚಿ ಬೀಳಿಸುವ ಮಾಹಿತಿಗಳು ಬಯಲಾಗುತ್ತಿವೆ. ಸದ್ಯ ಬೀದರ್ ಜಿಲ್ಲೆಯ ಡಿಸಿಯಾಗಿದ್ದ ಅನುರಾಗ್ ತಿವಾರಿಗೆ ಜೀವ ಬೆದರಿಕೆ ಇತ್ತೆಂಬ ಮಾಹಿತಿ ಲಭ್ಯವಾಗಿದೆ.
ಬೀದರ್(ಮೇ.21): IAS ಅಧಿಕಾರಿ ಮಧ್ಯಪ್ರದೇಶ ಮೂಲದ ಅನುರಾಗ್ ತಿವಾರಿ ಸಾವಿನ ರಹಸ್ಯ ದಿನ ಕಳೆಯುತ್ತಿದ್ದಂತೆ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಬೆಚ್ಚಿ ಬೀಳಿಸುವ ಮಾಹಿತಿಗಳು ಬಯಲಾಗುತ್ತಿವೆ. ಸದ್ಯ ಬೀದರ್ ಜಿಲ್ಲೆಯ ಡಿಸಿಯಾಗಿದ್ದ ಅನುರಾಗ್ ತಿವಾರಿಗೆ ಜೀವ ಬೆದರಿಕೆ ಇತ್ತೆಂಬ ಮಾಹಿತಿ ಲಭ್ಯವಾಗಿದೆ.
ಅನುರಾಗ್ ತಿವಾರಿಗೆ ಜೀವ ಬೆದರಿಕೆ ಇದ್ದು, ಈ ವಿಚಾರವನ್ನು ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದ ಅವರು 'ನನಗೆ ಜೀವ ಬೆದರಿಕೆ ಕರೆ ಬರ್ತಿವೆ. ನಾನು ಸತ್ತರೂ ಪರವಾಗಿಲ್ಲ' ಎಂದಿದ್ದರಂತೆ. ಇದರಿಂದ ನಿದ್ದೆ ಇಲ್ಲದೆ ಮಾತ್ರೆಗನ್ನೂ ಸೇವಿಸುತ್ತಿದ್ದರಂತೆ. ಬೀದರ್'ಗೂ ವರ್ಗಾವಣೆಯಾಗುವುದಕ್ಕೂ ಮೊದಲು ಕೊಡಗು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಿವಾರಿಯನ್ನು ರಾಜಕೀಯ ಒತ್ತಡದಿಂದ ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಗಿತ್ತೆಂಬ ಮಾತುಗಳೂ ಕೇಳಿ ಬಂದಿವೆ.
'ಬೀದರ್'ನಲ್ಲಿ ನನಗೆ ಒಂದು ವರ್ಷವೂ ಕೆಲಸ ಮಾಡಲು ಬಿಡುವುದಿಲ್ಲ' ಎಂಬ ಮಾತನ್ನೂ ಅವರು ತಮ್ಮ ಕಿರಿಯ ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದರಂತೆ. ಆದರೆ ಇಲ್ಲೂ ಅವರು ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹೀಗಾಗಿ ಬೀದರ್ ಜನತೆ ಹಾಗೂ ಅವರ ಸಹೋದ್ಯೋಗಿಗಳು ಇವರ ಸಾವನ್ನು ಸಹಜವೆಂದು ಒಪ್ಪಿಕೊಳ್ಳುತ್ತಿಲ್ಲ.
