ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿಯ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ  ಮತ್ತೊಂದು ಪ್ರಕರಣದಲ್ಲಿ 150 ಕೋಟಿ ಹಗರಣದ ಹುತ್ತಕ್ಕೆ ತಿವಾರಿ ಕೈ ಹಾಕಿದ್ದರು ಎನ್ನುವುದೂ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಸುವರ್ಣ ನ್ಯೂಸ್​'ಗೆ ಲಭ್ಯವಾಗಿದೆ.

ಬೆಂಗಳೂರು(ಮೇ.23): ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿಯ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ 150 ಕೋಟಿ ಹಗರಣದ ಹುತ್ತಕ್ಕೆ ತಿವಾರಿ ಕೈ ಹಾಕಿದ್ದರು ಎನ್ನುವುದೂ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಸುವರ್ಣ ನ್ಯೂಸ್​'ಗೆ ಲಭ್ಯವಾಗಿದೆ.

ಐಎಎಸ್​ ಅಧಿಕಾರಿ ಅನುರಾಗ್​ ತಿವಾರಿ ಸಾವಿನ ಪ್ರಕರಣದ ಗೊಂದಲ, ಅನುಮಾನಗಳಿನ್ನೂ ಬಗೆಹರಿದಿಲ್ಲ. 2 ಸಾವಿರ ಕೋಟಿ ಅಕ್ರಮ ಬಹಿರಂಗಕ್ಕೆ ಯತ್ನಿಸಿದ್ದರು ಅನ್ನೋದ್ರ ಜೊತೆಗೆ ಹೊಸ ಪ್ರಕರಣಗಳು ಇವಾಗ ಬಯಲಿಗೆ ಬಂದಿದೆ.. ಆಹಾರ ನಾಗರೀಕ ಸರಬರಾಜು ಇಲಾಖೆಯಲ್ಲಿ ಆಯುಕ್ತರಾಗಿದ್ದಾಗ ಕೆಲ ದೂರುಗಳು ದಾಖಲಾಗಿದ್ದವು. ವಿಧಾನಸಭೆಯ ಅರ್ಜಿಗಳ ಸಮಿತಿಯಲ್ಲೂ ದಾಖಲೆ ಸಮೇತ ದೂರೊಂದು ದಾಖಲಾಗಿತ್ತು. ಈ ಸಂಬಂಧ ಮಾಹಿತಿ ಕಲೆ ಹಾಕಿ ವಿಧಾನಸಭೆ ಅರ್ಜಿಗಳ ಸಮಿತಿಗೆ ವರದಿ ಸಲ್ಲಿಸಲು ತಯಾರಿ ನಡೆಸಿದ್ದರು ಅನ್ನೋದು ಬಹಿರಂಗವಾಗಿದೆ.

ಬಿಪಿಎಲ್​ ಕಾರ್ಡ್ ಫಲಾನುಭವಿಗಳ ಆಯ್ಕೆಯಲ್ಲಿ ಗೋಲ್ಮಾಲ್​

ನಿಗದಿತ ಅವಧಿಯಲ್ಲಿ ಗುಣಮಟ್ಟದ ಆಹಾರ ಪದಾರ್ಧಗಳ ಪೂರೈಕೆ ಮಾಡುವಲ್ಲಿ ಇಲಾಖೆ ವಿಫಲವಾಗಿದೆ. ಬಿಪಿಎಲ್​​ ಕಾರ್ಡ್​ಗೆ ಅರ್ಹ ಫಲಾನುಭವಿಗಳ ಆಯ್ಕೆ ಆಗ್ತಿಲ್ಲ.. ಫಲಾನುಭವಿಗಳನ್ನ ಗುರುತಿಸುವ ಕಾರ್ಯವನ್ನು ಗುತ್ತಿಗೆ ಆಧಾರದಲ್ಲಿ ವಹಿಸಿಕೊಂಡಿದ್ದ ಕೊಮ್ಯಾಟ್​ ಕಂಪನಿ ಅಕ್ರಮದಲ್ಲಿ ಮುಳುಗಿದೆ ಅನ್ನೋ ದೂರಿಗೆ ಯಶವಂತಪುರ ಶಾಸಕ ಎಸ್​.ಟಿ.ಸೋಮಶೇಖರ್​ ಮೇಲು ಸಹಿ ಮಾಡಿದ್ದರು. ಈ ಸಂಬಂಧ ಕಡತಗಳನ್ನು ಅನುರಾಗ್​ ತಿವಾರಿ ಪರಿಶೀಲಿಸಿದ್ದರು.

150 ಕೋಟಿ ರೂಪಾಯಿ ನಷ್ಟವಾಯ್ತಾ?: ಸಿಎಜಿ ವರದಿ ಆಧರಿಸಿ ಬೆನ್ನತ್ತಿದ್ದರಾ ಅನುರಾಗ್​ ತಿವಾರಿ?

BPL​ ಕಾರ್ಡ್​ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಅಕ್ರಮದ ಬಗ್ಗೆ ಸಿಎಜಿ ಅಧಿಕಾರಿಗಳು ವರದಿ ನೀಡಿದ್ದರು. ಈ ವರದಿ ಆಧರಿಸಿ ಅನುರಾಗ್​ ತಿವಾರಿ ಮತ್ತಷ್ಟು ಲೋಪಗಳನ್ನ ಬಯಲಿಗೆ ಎಳೆದಿದ್ದರು ಎನ್ನಲಾಗಿದೆ. ಕೋಮ್ಯಾಟ್​​​ ಕಂಪನಿಯಿಂದ ಸರ್ಕಾರಕ್ಕೆ 150 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದರಂತೆ. ಜೊತೆಗೆ ತೂಕ ಮತ್ತು ತಿ ಪರಿಶೀಲನೆ ಮಾಡ್ಬೇಕಿತ್ತು. ಈ ಬಗ್ಗೆ ಮಾಹಿತಿ, ದಾಖಲೆಗಳನ್ನ ಸಲ್ಲಿಸ್ಬೇಕು ಅಂತ ಆಹಾರ, ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾಗೆ ವಿಧಾಸನಭೆಯ ಕಾರ್ಯದರ್ಶಿ ಮೇ 5ರಂದೇ ಪತ್ರವನ್ನೂ ಬರೆದಿದ್ದರು. ಆದರೆ ಈವರೆಗೆ ಯಾವುದೇ ಮಾಹಿತಿ ಆಗಲಿ, ದಾಖಲೆಗಳನ್ನಾಗಲೀ ಅರ್ಜಿಗಳ ಸಮಿತಿಗೆ ಸಲ್ಲಿಸಿಲ್ಲ.

ಒಟ್ಟಿನಲ್ಲಿ ಅನುರಾಗ್ ತಿವಾರಿ ಸಾವು ಹಲವು ಆಯಾಮಗಳನ್ನು ಪಡೀತಿದ್ದು ಯಾವುದು ಅಂತಿಮ ಆಗುತ್ತ ಎನ್ನುವುದನ್ನು ಕಾದು ನೋಡಬೇಕಿದೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​​