ಫೆಮಿನಾ ಮಿಸ್ ಇಂಡಿಯಾ-2018 ಸ್ಪರ್ಧೆಪ್ರಶಸ್ತಿ ಮುಡಿಗೇರಿಸಿಕೊಂಡ ಅನುಕೀರ್ತಿ ವಾಸ್ತಮಿಳುನಾಡಿನ 19 ವರ್ಷದ ವಿದ್ಯಾರ್ಥಿನಿಕರಣ್ ಜೋಹರ್ ಆಯುಶ್ಮಾನ್ ಖುರಾನಾ ಆಯೋಜನೆಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಪ್ರಶಸ್ತಿ ಪ್ರಧಾನ
ಮುಂಬೈ(ಜೂ.20): ಫೆಮಿನಾ ಮಿಸ್ ಇಂಡಿಯಾ 2018 ಕಿರೀಟವನ್ನು ತಮಿಳುನಾಡಿನ 19 ವರ್ಷದ ಅನುಕೀರ್ತಿ ವಾಸ್ ಮುಡಿಗೇರಿಸಿಕೊಂಡಿದ್ದಾರೆ.
ಮುಂಬೈನಲ್ಲಿ ನಿರ್ಮಾಪಕ ಕರಣ್ ಜೋಹರ್ ಮತ್ತು ನಟ ಆಯುಶ್ಮಾನ್ ಖುರಾನಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಅನಿಕೀರ್ತಿ ಪ್ರಶಸ್ತಿ ಮುಡುಗೇರಿಸಿಕೊಂಡರು. ತೀರ್ಪುಗಾರರಲ್ಲಿ ಒಬ್ಬರಾಗಿದ್ದ 2017ರ ಮಿಸ್ ವರ್ಲ್ಡ್ ವಿನ್ನರ್ ಮಾನುಷಿ ಚಿಲ್ಲರ್ ಅನುಕೀರ್ತಿಗೆ ಮಿಸ್ ಇಂಡಿಯಾ-2018 ಕಿರೀಟ ತೊಡಿಸಿದರು.
ಹರಿಯಾಣದ ಮೀನಾಕ್ಷಿ ಚೌಧರಿ ಮೊದಲ ರನ್ನರ್ ಅಪ್ ಹಾಗೂ ಆಂಧ್ರ ಪ್ರದೇಶದ ಶ್ರೇಯಾ ರಾವ್ ಕಮವರಪು ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ತೀರ್ಪುಗಾರರ ಸಮಿತಿಯಲ್ಲಿ ಕ್ರಿಕೆಟರ್ ಇರ್ಫಾನ್ ಪಠಾಣ್ ಮತ್ತು ಕೆಎಲ್ ರಾಹುಲ್, ಬಾಲಿವುಡ್‌ನ ಮಲೈಕಾ ಅರೋರ, ಬಾಬಿ ಡಿಯೋಲ್ ಮತ್ತು ಕುನಾಲ್ ಕಪೂರ್ ಇದ್ದರು.
ಅನುಕೀರ್ತಿ ಈ ಮೊದಲು ಎಫ್‌ಬಿಬಿ ಕಲರ್ಸ್ ಫೆಮಿನಾ ಮಿಸ್ ತಮಿಳುನಾಡು ಪಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ. ಇನ್ನು ಫೆಮಿನಾ ಮಿಸ್ ಇಂಡಿಯಾ 2018 ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್, ಜಾಕ್ವಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ನಟಿಯರು ಕಾರ್ಯಕ್ರಮ ನಡೆಸಿಕೊಟ್ಟರು.
