ವಿಶ್ವಸಂಸ್ಥೆ: ಪೋರ್ಚುಗಲ್‌ನ ಮಾಜಿ ಪ್ರಧಾನಿ ಆ್ಯಂಟೊನಿಯಾ ಗುಟೆರಸ್‌ರನ್ನು ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸದಸ್ಯರು ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

10 ಅಭ್ಯರ್ಥಿಗಳ ಮಧ್ಯೆ ಬುಧವಾರ ನಡೆದ 6ನೇ ಅನೌಪಚಾರಿಕ ಚುನಾವಣೆ ಬಳಿಕ, ರಷ್ಯಾದ ವಿಶ್ವಸಂಸ್ಥೆ ರಾಯಭಾರಿ ವಿಟಲಿ ಚುರ್ಕಿನ್‌ ತಿಳಿಸಿ ದ್ದಾರೆ. ‘‘193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆ ಯ ಸಾಮಾನ್ಯ ಸಭೆಯಲ್ಲಿ ಗುರುವಾರ ಬೆಳಗ್ಗೆ ಔಪ ಚಾರಿಕ ಮತದಾನ ನಡೆಯಲಿದ್ದು, ಬಾನ್‌-ಕಿ-ಮೂನ್‌ ಜವಾಬ್ದಾರಿಯನ್ನು ಆ್ಯಂಟೊನಿ ಯಾ ಗುಟೆರಸ್‌ ವಹಿಸಿ ಕೊಳ್ಳಲಿದ್ದಾರೆ,'' ಎಂದು ಚುರ್ಕಿನ್‌ ಸ್ಪಷ್ಟಪಡಿಸಿದ್ದಾರೆ.