Asianet Suvarna News Asianet Suvarna News

ತಮಿಳುನಾಡಿನಲ್ಲಿ ಗೋಲಿಬಾರ್ : 10ಕ್ಕೂ ಹೆಚ್ಚು ಸಾವು

ಪರಿಸರ ಮಾಲಿನ್ಯದ ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಗಲಭೆಗೆ ತಿರುಗಿದ ಕಾರಣ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. 

Anti Sterlite protests  Nine killed amid clashes between police and protesters

ನವದೆಹಲಿ(ಮೇ.22): ಪ್ರತಿಭಟನಾ ನಿರತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟು 20ಕ್ಕೂ ಮಂದಿ ಗಾಯಗೊಂಡ ಘಟನೆ ತೂತುಕಡಿ ಜಿಲ್ಲೆಯ ತೂತಿಕೊರಿನ್ ನಗರದಲ್ಲಿ ನಡೆದಿದೆ.


ಪರಿಸರ ಮಾಲಿನ್ಯದ ಕಾರಣದಿಂದ ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಗಲಭೆಗೆ ತಿರುಗಿದ ಕಾರಣ ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. 
ಚೆನ್ನೈ'ನಿಂದ 600 ಕಿ.ಮೀ ದೂರದಲ್ಲಿರುವ ತೂತಿಕೊರಿನ್ ನಗರದಲ್ಲಿ ಸ್ಟೀರ್ಲೈಟ್ ತಾಮ್ರ ಘಟಕದಿಂದ ಅಂತರ್ಜಲ ಕಲುಷಿತ ಉಂಟಾಗುತ್ತಿದೆ ಎಂಬ ಕಾರಣದಿಂದ  ಕಳೆದ 100 ದಿನಗಳಿಂದ ಘಟಕವನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದು ಮೆರವಣಿಗೆಗೆ ಅವಕಾಶ ಕೇಳಿದ್ದು ಜಿಲ್ಲಾಡಳಿದ ನಿರಾಕರಿಸಿ 144 ಸೆಕ್ಷನ್ ಜಾರಿಗೊಳಿಸಿತ್ತು. 
5 ಸಾವಿರ ಮಂದಿಯ ಪ್ರತಿಭಟನಾ ನಿರತರ ಒಂದು ಗುಂಪು ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಕಾರಣ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಸ್ಥಳದಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರು ಬೀಡುಬಿಟ್ಟಿದ್ದು ಬಿಗುವಿನ ಪರಿಸ್ಥಿತಿ ಮುಂದುವರಿದಿದೆ. ವೇದಾಂತ ಕಂಪನಿಯ ಸ್ಟೀರ್ಲೈಟ್ ತಾಮ್ರ ಘಟಕ ಪ್ರತಿವರ್ಷ 4 ಲಕ್ಷ ಟನ್ ತಾಮ್ರವನ್ನು ಉತ್ಪಾದಿಸುತ್ತದೆ.

Follow Us:
Download App:
  • android
  • ios