ತೂತುಕುಡಿ ಹಿಂಸಾಚಾರದಲ್ಲಿ ಪ್ರತಿಭಟನಾಕಾರರು ಸಾಯಲು ಆರ್ ಎಸ್ ಎಸ್ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆರ್ ಎಸ್ ಎಸ್ ಸಿದ್ದಾಂತಗಳನ್ನು ವಿರೋಧಿಸಿದ್ದೆ ಪ್ರತಿಭಟನಾಕಾರರ ಸಾವಿಗೆ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರು (ಮೇ. 23): ತೂತುಕುಡಿ ಹಿಂಸಾಚಾರದಲ್ಲಿ ಪ್ರತಿಭಟನಾಕಾರರು ಸಾಯಲು ಆರ್ ಎಸ್ ಎಸ್ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆರ್ ಎಸ್ ಎಸ್ ಸಿದ್ದಾಂತಗಳನ್ನು ವಿರೋಧಿಸಿದ್ದೆ ಪ್ರತಿಭಟನಾಕಾರರ ಸಾವಿಗೆ ಕಾರಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆರ್ ಎಸ್ ಎಸ್ ಸಿದ್ಧಾಂತಗಳನ್ನು ಒಪ್ಪದೇ ಇರುವುದಕ್ಕೆ ತಮಿಳಿಗರ ಮಾರಣ ಹೋಮ ಮಾಡಲಾಗಿದೆ. ತಮಿಳಿಗರ ಧ್ವನಿಯನ್ನು ಹತ್ತಿಕ್ಕಲು ಆರ್ ಎಸ್ ಎಸ್ ಹಾಗೂ ಮೋದಿಗೂ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ತಮಿಳಿಗರಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಾ, ಆತ್ಮೀಯ ತಮಿಳುನಾಡಿನ ಸಹೋದರ, ಸಹೋದರಿಯರೇ, ನಾವು ನಿಮ್ಮೊಂದಿಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ತೂತುಕುಡಿಯಲ್ಲಿ ಹೊಸ ತಾಮ್ರ ಘಟಕ ಸ್ಥಾಪನೆ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 11 ಮಂದಿ ಸಾವನ್ನಪ್ಪಿದ್ದಾರೆ. 65 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
