ಲಂಡನ್[ಆ.20]: ಬ್ರಿಟನ್‌ನ ವೇಲ್ಸ್‌ ಪ್ರಾಂತ್ಯದ ಪೋತ್‌ರ್‍ಕಾಲ್‌ ಎಂಬ ಪಟ್ಟಣದಲ್ಲಿ ಸಾರ್ವಜನಿಕ ಟಾಯ್ಲೆಟ್‌ನಲ್ಲಿ ಲೈಂಗಿಕ ಚಟುವಟಿಕೆ ಹಾಗೂ ಪುಂಡಾಟಿಕೆ ನಡೆಸುವವರ ಸಂಖ್ಯೆ ಜಾಸ್ತಿಯಾಗಿದೆಯಂತೆ.

ಜನರ ಈ ಚಟಕ್ಕೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ ಸಾರ್ವಜನಿಕ ಟಾಯ್ಲೆಟ್‌ಗಳಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ಲೈಂಗಿಕ ಚಟುವಟಿಕೆ ತಡೆಯವ ಉಪಕರಣಗಳನ್ನು ಅಳವಡಿಸಲು ನಿರ್ಧರಿಸಿದೆ.

'ಆ' ಸಮಯದಲ್ಲಿ ನೋವಾಗುತ್ತಾ? ಈ ನಂಬಿಕೆಗಳಿಗೆ ಹೇಳಿ ಗುಡ್‌ ಬೈ!

ಟಾಯ್ಲೆಟ್‌ಗಳಲ್ಲಿ ಇಬ್ಬರು ಒಟ್ಟಿಗೆ ಹೋದರೆ ಅವರನ್ನು ಸೆನ್ಸರ್‌ಗಳು ಗಮನಿಸಲಿವೆ. ಟಾಯ್ಲೆಟ್‌ನಲ್ಲಿ ಕೂಗಾಟ ಕಿರುಚಾಟದ ಶಬ್ದ ಕೇಳಿ ಬಂದರೆ ವಾಟರ್‌ ಜೆಟ್‌ಗಳಿಂದ ನೀರು ಚಿಮ್ಮಲಿದೆ.

ಜೋರಾಗಿ ಅಲಾರಾಂ ಹೊಡೆದುಕೊಳ್ಳಲಿದ್ದು, ಬಾಗಿಲುಗಳು ತೆರೆದುಕೊಳ್ಳಲಿದೆ. ಹೀಗಾಗಿ ಒಳಗೆ ಇದ್ದವರು ಹೊರಗೆ ಓಡಿ ಬರದೇ ಬೇರೆ ಗತಿಯೇ ಇಲ್ಲ.