ಕನ್ನಡದಲ್ಲಿರುವ ಕಡತಗಳನ್ನು ನನಗೆ ಕಳುಹಿಸಲೇಬೇಡಿ. ಇಂಗ್ಲಿಷ್‌ ಕಡತಗಳನ್ನು ಮಾತ್ರ ಕಳುಹಿಸಿ ಎಂದು ಅಧೀನ ಅಧಿಕಾರಿಗಳಿಗೆ ಸೂಚನೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀವತ್ಸ ಅವರನ್ನು ಕೇಂದ್ರ ಸರ್ಕಾರದ ವ್ಯಾಪ್ತಿಯ ಕಾಫಿ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು(ಏ.12): ಕನ್ನಡದಲ್ಲಿರುವ ಕಡತಗಳನ್ನು ನೋಡುವುದಿಲ್ಲ ಎಂದು ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿದ್ದ ಐಎಎಸ್‌ ಅಧಿಕಾರಿ ಶ್ರೀವತ್ಸ ಕೃಷ್ಣ ಅವರನ್ನು ಕೇಂದ್ರ ಸರ್ಕಾರದ ಸೇವೆಗೆ ಎತ್ತಂಗಡಿ ಮಾಡಲಾಗಿದೆ.

ಕನ್ನಡದಲ್ಲಿರುವ ಕಡತಗಳನ್ನು ನೋಡುವುದಿಲ್ಲ ಎಂದು ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸಿದ್ದ ಐಎಎಸ್‌ ಅಧಿಕಾರಿ ಶ್ರೀವತ್ಸ ಕೃಷ್ಣ ಅವರನ್ನು ಕೇಂದ್ರ ಸರ್ಕಾರದ ಸೇವೆಗೆ ಎತ್ತಂಗಡಿ ಮಾಡಲಾಗಿದೆ.

ಕನ್ನಡದಲ್ಲಿರುವ ಕಡತಗಳನ್ನು ನನಗೆ ಕಳುಹಿಸಲೇಬೇಡಿ. ಇಂಗ್ಲಿಷ್‌ ಕಡತಗಳನ್ನು ಮಾತ್ರ ಕಳುಹಿಸಿ ಎಂದು ಅಧೀನ ಅಧಿಕಾರಿಗಳಿಗೆ ಸೂಚನೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀವತ್ಸ ಅವರನ್ನು ಕೇಂದ್ರ ಸರ್ಕಾರದ ವ್ಯಾಪ್ತಿಯ ಕಾಫಿ ಮಂಡಳಿಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿಯಾಗಿದ್ದ ಶ್ರೀವತ್ಸ, ಹಿಂದಿನಿಂದಲೂ ಕನ್ನಡ ಕಡತಗಳ ಬಗ್ಗೆ ತಾತ್ಸಾರ ತೋರಿಸಿದ್ದರು. ಮಾ.4ರಂದು ತಮ್ಮ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿ, ಕನ್ನಡ ಕಡತಗಳನ್ನು ನನ್ನ ಬಳಿ ಕಳುಹಿಸಲೇಬೇಡಿ ಎಂದಿದ್ದರು. ಈ ವಿಚಾರ ಸರ್ಕಾರದ ಗಮನಕ್ಕೆ ಬಂದು ಅನೇಕ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಗಡಿ ಜಾಗೃತ ಸಮಿತಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದವು.