ಪ್ರಸಿದ್ದ ಶೆಫ್ ಮತ್ತು ಕಥೆಗಾರ ಆ್ಯಂಥನಿ ಬೌರ್ಡೆನ್ ವಿಧಿವಶಫ್ರಾನ್ಸ್ ಹೊಟೇಲ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಆ್ಯಂಥನಿ"Parts Unknown" ಎಂಬ ಟಿವಿ ಕಾಯರ್ಯಕ್ರಮದ ಮೂಲಕ ಜನಪ್ರೀಯತೆ

ನ್ಯೂಯಾರ್ಕ್(ಜೂ.8): ಜಗತ್ತು ಕಂಡ ಅತ್ಯಂತ ಪ್ರಸಿದ್ದ ಶೆಫ್ ಮತ್ತು ಕಥೆಗಾರ ಆ್ಯಂಥನಿ ಬೌರ್ಡೆನ್ ವಿಧಿವಶರಾಗಿದ್ದಾರೆ. 61 ವರ್ಷದ ಆ್ಯಂಥನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಗತ್ತಿನ ವಿವಿಧ ಭಾಗಗಗಳಲ್ಲಿನ ಆಹಾರ ಪದ್ದತಿ, ಸಾಂಸ್ಕೃತಿಕ ಭಿನ್ನತೆ ಹೀಗೆ ವಿವಿಧ ಜನಪ್ರೀಯ ಟಿವಿ ಕಾರ್ಯಕ್ರಮಗಳ ಮೂಲಕವೇ ವಿಶ್ವದ ಜನರ ಮನಗೆದ್ದಿದ್ದ ಆ್ಯಂಥನಿ, ಫ್ರಾನ್ಸ್ ನ ಹೊಟೇಲ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ್ಯಂಥನಿ ಅವರ ಗೆಳೆಯ ಎರಿಕ್ ರಿಪರ್ಟ್ ಬೆಳಗ್ಗೆ ಇವರ ಕೋಣೆಗೆ ಹೋದಾಗ ಆ್ಯಂಥನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ.

Scroll to load tweet…

ಗೆಳೆಯರು ಮತ್ತು ಅಭಿಮಾನಿ ಬಳಗದಲ್ಲಿ ಟೋನಿ ಎಂದೇ ಪ್ರಖ್ಯಾತರಾಗಿದ್ದ ಬೌರ್ಡೆನ್, ತಮ್ಮ ನಿರೂಪಣಾ ಶೈಲಿಯಿಂದಲೇ ಪ್ರಸಿದ್ದಿ ಪಡೆದವರು. ಜಗತ್ತಿನ ವಿಶಿಷ್ಟ ಖಾದ್ಯಗಳ ಕುರಿತು ಮಾಹಿತಿ ಒಸಗಿಸುತ್ತಿದ್ದ ಆ್ಯಂಥನಿ, ಹೇಗೆ ನಿರ್ದಿಷ್ಟ ಆಹಾರ ಪದ್ದತಿಗಳು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಅತ್ಯಂತ ಆಕರ್ಷಕವಾಗಿ ವಿವರಿಸುತ್ತಿದ್ದರು. ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿದ್ದ ಆ್ಯಂಥನಿ, ತಮ್ಮ "Parts Unknown" ಎಂಬ ಟಿವಿ ಕಾಯರ್ಯಕ್ರಮದ ಮೂಲಕ ಮನೆ ಮನೆ ತಲುಪಿದ್ದರು.

Scroll to load tweet…