ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್​​ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ  ಎಸ್​ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ.

ಬೆಂಗಳೂರು(ಸೆ.17): ಪತ್ರಕರ್ತೆ ಗೌರಿ ಲಂಕೇಶ್​​​ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್​ಐಟಿ ಅಧಿಕಾರಿಗಳ ತನಿಖೆ ತೀವ್ರಗೊಂಡಿದ್ದೆ.

ಗೌರಿ ಲಂಕೆಶ್​​ ಹತ್ಯೆಯಲ್ಲಿ ಸ್ಥಳೀಯ ರೌಡಿಗಳ ಕೈವಾಡವಿರಬಹುದು ಎಂಬ ಶಂಕೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಾಲಿ ರೌಡಿ ತನ್ವೀರ್'​​ನನ್ನ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಗೌರಿ ಹತ್ಯೆಗೆ ಹಂತಕ ಬಳಸಿದ್ದು ಗನ್​​ ಎಲ್ಲಿಂದ ಸರಬರಾಜು ಆಗಿದೆ ಅನ್ನೋದನ್ನ ತನಿಖಾಧಿಕಾರಿಗಳ ಮುಂದೆ ರೌಡಿ ತನ್ವೀರ್​​ ಬಯಲು ಮಾಡಿದ್ದಾನೆ.

ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್​​ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ ಎಸ್​ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ. ತನ್ವೀರ್'ನಿಂದ ಮಾಹಿತಿ ಕಲೆ ಹಾಕಿದ್ದ ಎಸ್'​ಐಟಿ ಅಧಿಕಾರಿಗಳು ಹಂತಕರ ಸುಳಿವನ್ನ ಹುಡುಕಿ ಬಿಜಾಪುರಕ್ಕೆ ತೆರಳಿದ್ದಾರೆ. ​