ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಹಿಳೆ, ಯಶವಂತಪುರದ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ನೆಲಮಂಗಲ(ಜ.09): ಮತ್ತೊಬ್ಬ ವಿಕೃತ ಕಾಮಿಯ ಹೀನಾಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು ನಗರ ಹಾಗೂ ಹೊರವಲಯದ ಜನರಲ್ಲಿ ಈ ಕಾಮಿಯ ಕೃತ್ಯ ಆತಂಕ ಹುಟ್ಟಿಸಿದೆ. ಒಂಟಿ ಮನೆಯ ಮಹಿಳೆಯರೆ ಈ ವಿಕೃತ ಕಾಮಿಯ ಟಾರ್ಗೆಟ್ ಆಗಿದ್ದಾರೆ.ನಿನ್ನೆ ನೆಲಮಂಗಲ ಪಟ್ಟಣದ ನಿರ್ಮಾಣ ಹಂತದ ಮನೆಯಲ್ಲಿ ಒಂಟಿ ಮಹಿಳೆಯ ಮೇಲೆ ಮಹಿಳೆಯೊಬ್ಬರ ಮೇಲೆ ಈ ವಿಕೃತಕಾಮಿ ಮೃಗೀಯ ರೀತಿಯಲ್ಲಿ ವಿಕೃತ ಕಾಮವನ್ನು ತೋರಿಸಿದ್ದಾನೆ.
ಹೊಸ ಮನೆಯಲ್ಲಿ ಟೈಲ್ಸ್ ಅಳವಡಿಸಲು ಬಂದಿದ್ದ ವಿಕೃತ ಕಾಮಿ ಮಹಿಳೆಯ ಕಣ್ಣು, ಕುತ್ತಿಗೆ ಕೊಯ್ದು ಮನಸೋ ಇಚ್ಛೆ ಹಲ್ಲೆ ನಡೆಸಿ ಗುಪ್ತಾಂಗಗಳನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಹಿಳೆ, ಯಶವಂತಪುರದ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರ ರಾಜ್ಯಗಳಿಂದ ಕೆಲಸಕ್ಕೆ ಬಂದಿರುವವರಿಂದ ಕೃತ್ಯ ಎನ್ನಲಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಕೃತ ಕಾಮಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.
