ಇತರ ಆರ್ಜಿ'ಗಳ ತೀರ್ಪು ಇಂದೇ?

First Published 16, Feb 2018, 10:26 AM IST
Another Pititions Verdict also toady
Highlights

ಕರ್ನಾಟಕವು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪಾಲಿಸಿಲ್ಲ ಎಂಬ ನ್ಯಾಯಾಂಗ ನಿಂದನೆ ಅರ್ಜಿಗಳನ್ನೂ ಕೂಡ ದಾಖಲಿಸಿತ್ತು.

ನವದೆಹಲಿ(ಫೆ.16): ಕಾವೇರಿ ನದಿ ನೀರು ಹಂಚಿಕೆಯ ಪ್ರಕರಣದಲ್ಲಿ ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಿವಿಲ್ ಮೇಲ್ಮನವಿಗಳ ಜೊತೆ ಜೊತೆಗೆ ತಮಿಳುನಾಡು ಸಲ್ಲಿಸಿರುವ ಇನ್ನೂ ಅನೇಕ ಅರ್ಜಿಗಳೂ ಶುಕ್ರವಾರವೇ ಇತ್ಯರ್ಥ ವಾಗುವ ಸಾಧ್ಯತೆಯೇ ಹೆಚ್ಚು. ಈ ರೀತಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಬಹುತೇಕ ಸಂದರ್ಭದಲ್ಲಿ ಕರ್ನಾಟಕ ತನಗೆ ನಿಗದಿತ ಪ್ರಮಾಣದಲ್ಲಿ ನೀರು ನೀಡುತ್ತಿಲ್ಲ ಎಂದು  ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳೇ ಹೆಚ್ಚು.

ಬಳಿಕ ಕರ್ನಾಟಕವು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪಾಲಿಸಿಲ್ಲ ಎಂಬ ನ್ಯಾಯಾಂಗ ನಿಂದನೆ ಅರ್ಜಿಗಳನ್ನೂ ಕೂಡ ದಾಖಲಿಸಿತ್ತು. ಹೀಗೆಯೇ ನ್ಯಾಯಾಧಿಕರಣದ ಐತೀರ್ಪಿನಲ್ಲಿ ಉಲ್ಲೇಖಿಸಿದ್ದ ಕಾವೇರಿ ನೀರು ನಿರ್ವಹಣಾ ಮಂಡಳಿ ಆಗಬೇಕೋ, ಬೇಡವೋ ಎನ್ನುವ ವಿಚಾರ ಕೂಡ ಶುಕ್ರವಾರದ ತೀರ್ಪಿನಲ್ಲೇ ಅಡಕವಾಗಿ ಬರುವ ನಿರೀಕ್ಷೆ ಇದೆ.

loader