ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್, ಚಂದಾಪುರ ಸುತ್ತ ಬಿಗುವಿನ ವಾತಾವರಣ ವ್ಯಕ್ತವಾಗಿದೆ
ಬೆಂಗಳೂರು(ಮಾ.14): ಬೆಳ್ಳಂಬೆಳಿಗ್ಗೆ ನಗರದಲ್ಲಿ ಬಿಜೆಪಿ ಮುಖಂಡ, ಪುರಸಭೆ ಸದಸ್ಯರೊಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಶ್ರೀನಿವಾಸ್ ಪ್ರಸಾದ್ ಕೊಲೆಯಾದವರು. ಹೊಸೂರು ರಸ್ತೆಯ ಬಿಟಿಎಲ್ ಕಾಲೇಜ್ ಬಳಿ ಶ್ರೀನಿವಾಸ್ ಅವರು ವಾಕಿಂಗ್'ಗೆ ಹೋಗುತ್ತಿದ್ದಾಗ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮೃತ ಶ್ರೀನಿವಾಸ ಪ್ರಸಾದ್ ಪತ್ನಿ ಕೂಡಾ ಜಿ.ಪಂ. ಸದಸ್ಯೆಯಾಗಿದ್ದಾರೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್, ಚಂದಾಪುರ ಸುತ್ತ ಬಿಗುವಿನ ವಾತಾವರಣ ವ್ಯಕ್ತವಾಗಿದೆ. ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
