ಮಾಜಿ ಸಚಿವ ಎಚ್.ವೈ ಮೇಟಿ ಸಿಡಿ ಪ್ರಕರಣ ರಾಜ್ಯ ರಾಜಕಾರಣಿಗಳ ನಿದ್ದೆ ಕೆಡೆಸಿದೆ. ಮೇಟಿ ಸಿಡಿ ಪ್ರಕರಣ ಬಯಲಿಗೆಳೆದ ಉದ್ಯಮಿ ರಾಜಶೇಖರ ಮಲಾಲಿ ಇನ್ನೂ ಮೂರ್ನಾಲ್ಕು ಜನರ ಸಿಡಿ ಇರುವ ಬಗ್ಗೆ ಮಾತನಾಡಿರುವುದರಿಂದ ರಾಜಕಾರಣಿಗಳ ನಿದ್ದೆ ಕೆಡೆಸಿದೆ.
ಬೆಂಗಳೂರು(ಡಿ.23): ಮಾಜಿ ಸಚಿವ ಎಚ್.ವೈ ಮೇಟಿ ಸಿಡಿ ಪ್ರಕರಣ ರಾಜ್ಯ ರಾಜಕಾರಣಿಗಳ ನಿದ್ದೆ ಕೆಡೆಸಿದೆ. ಮೇಟಿ ಸಿಡಿ ಪ್ರಕರಣ ಬಯಲಿಗೆಳೆದ ಉದ್ಯಮಿ ರಾಜಶೇಖರ ಮಲಾಲಿ ಇನ್ನೂ ಮೂರ್ನಾಲ್ಕು ಜನರ ಸಿಡಿ ಇರುವ ಬಗ್ಗೆ ಮಾತನಾಡಿರುವುದರಿಂದ ರಾಜಕಾರಣಿಗಳ ನಿದ್ದೆ ಕೆಡೆಸಿದೆ.
ತಮ್ಮ ಬಗ್ಗೆ ಸಿಡಿ ಇರುವ ಭಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಜಿ.ಟಿ ಪಾಟೀಲ್ ತಮ್ಮ ವಿರುದ್ದ ವಿಷಯ ಪ್ರಸಾರ ಮಾಡದಂತೆ ಕೋರ್ಟ್'ನಲ್ಲಿ ತಡೆಯಾಜ್ಞೆ ತಂದಿಟ್ಟುಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಳಗಿಯ ಕಾಂಗ್ರೆಸ್ ಶಾಸಕ ಜಿ.ಟಿ. ಪಾಟೀಲ್ ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಪಾಟೀಲರು ಆ ಶಾಸಕರು ಮೇಟಿಯವರ ಜಿಲ್ಲೆಗೆ ಸೇರಿದವರೇ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
RTI ಕಾರ್ಯಕರ್ತ ರಾಜಶೇಖರ್ ಮಲಾಲಿಯವರು ಹೆಚ್.ವೈ ಮೇಟಿಯ ಸಿಡಿ ಬಿಡುಗಡೆಯ ಬಳಿಕ ತನ್ನ ಬಳಿ ಇನ್ನೂ ಮೂರ್ನಾಲ್ಕು ರಾಜಕಾರಣಿಗಳ ಸಿಡಿ ಇದೆ, ಇನ್ನಷ್ಟು ಸೂಕ್ತ ದಾಖಲೆಗಳೊಂದಗೆ ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅವರು ಸಿಡಿಸಿದ ಈ ಬಾಂಬ್ ಸಾಕಷ್ಟು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿತ್ತು.
ಇನ್ನು ಈ ಪ್ರಕರಣದಲ್ಲಿ ತಾನು ಭಾಗಿಯಾಗಿರಲಿಲ್ಲವೆಂದಾದರೆ ಕೋರ್ಟ್'ನಿಂದ ತಡೆಯಾಜ್ಞೆ ತರುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳೂ ಮೂಡುತ್ತವೆ.
