ಚಿನ್ನಕ್ಕಾಗಿ ಮಹಿಳೆಯರೆ ಒಂಟಿ ಮಹಿಳೆಯರನ್ನ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನೆಡೆದಿದೆ. ಕೊಲೆಯನ್ನ ನೋಡುತ್ತಿದ್ದರೆ ದಂಡುಪಾಳ್ಯ ಗ್ಯಾಂಗ್ ಮತ್ತೆ ಹುಟ್ಟಿಕೊಳ್ತಾ ಅನ್ಸುತ್ತೆ.

ಹಾಸನ(ಅ.14): ದಂಡುಪಾಳ್ಯ ಗ್ಯಾಂಗ್ ಹೆಸರು ಕೇಳಿದರೆ ಇಡೀ ರಾಜ್ಯವೇ ಬೆಚ್ಚಿ ಬೀಳುತ್ತೆ. ಈ ಗ್ಯಾಂಗ್`ನ ಕ್ರೌರ್ಯದ ಬಗ್ಗೆ ಕೇಳೇ ಇರುತ್ತೀರಿ. ಇಂತಹುದ್ದೇ ಗ್ಯಾಂಗ್ ಹಾಸನದಲ್ಲಿ ಹುಟ್ಟಿಕೊಡಿದೆಯಾ..? ಎಂಬ ಸಂಶಯ ಮೂಡಿದೆ.

ಚಿನ್ನಕ್ಕಾಗಿ ಮಹಿಳೆಯರೆ ಒಂಟಿ ಮಹಿಳೆಯರನ್ನ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನೆಡೆದಿದೆ. ಕೊಲೆಯನ್ನ ನೋಡುತ್ತಿದ್ದರೆ ದಂಡುಪಾಳ್ಯ ಗ್ಯಾಂಗ್ ಮತ್ತೆ ಹುಟ್ಟಿಕೊಳ್ತಾ ಅನ್ಸುತ್ತೆ. ಸದ್ಯ, ವೃದ್ದ ಮಹಿಳೆಯನ್ನ ಕೊಂದಿರುವ 6 ಆರೋಪಿಗಳನ್ನ ಹಾಸನ ಜಿಲ್ಲಾ ಪೋಲಿಸರು ಬಂಧಿಸಲು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರೂಪ, ಪಾರ್ವತಮ್ಮ, ಲತಾ, ಶ್ವೇತಾ, ಶ್ರೀನಿಧಿ ಮತ್ತು ದಿವ್ಯ ಅಂತಾ ಗುರುತಿಸಲಾಗಿದೆ. ಸೆ.30 ರಂದು ವೃದ್ದ ಮಹಿಳೆಯನ್ನ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ನಂತರ ಮತ್ತೆರಡು ಕೊಲೆಗಳು ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ ಈ ಕೀಚಕ ಮಹಿಳೆಯರು ಚಿನ್ನಕ್ಕಾಗಿ ಮೂರು ಹೆಂಗಸರನ್ನ ಫಿನಿಷ್ ಮಾಡಿದ್ದಾರೆ. ವಿಶೇಷವೆಂದರೆ ಇವೆರೆಲ್ಲ ೊಂದೇ ಕುಟುಂಬದವರು.