Asianet Suvarna News Asianet Suvarna News

ಶೀಘ್ರ ಕಾಂಗ್ರೆಸ್‌ಗೆ ಮತ್ತಿಬ್ಬರು ಶಾಸಕರು ಗುಡ್‌ಬೈ?

ಈಗಾಗಲೇ ಒಂದು ಶಾಕ್ ನಿಂದಲೇ ಚೇತರಿಸಿಕೊಳ್ಳದ ಕಾಂಗ್ರೆಸ್ ಗೆ ಇದೀಗ ಮತ್ತೊಂದು ಶಾಕ್ ಕಾದಿದೆ. ಶೀಘ್ರವೇ ಇನ್ನಿಬ್ಬರು ಕಾಂಗ್ರೆಸ್ ಗೆ ಕೆಯ ಕೊಡುವ ಸಾದ್ಯತೆ ಇದೆ. 

Another 2 congress leader May Good By to Congress
Author
Bengaluru, First Published Oct 18, 2018, 12:16 PM IST

ಪಣಜಿ :  ಕಾಂಗ್ರೆಸ್‌ನ ಇಬ್ಬರು ಶಾಸಕರ ದಿಢೀರ್‌ ರಾಜೀನಾಮೆಯಿಂದ ಆಘಾತಕ್ಕೆ ಒಳಗಾಗಿರುವ ಗೋವಾ ಕಾಂಗ್ರೆಸ್‌ಗೆ ಶೀಘ್ರದಲ್ಲೇ ಇನ್ನಿಬ್ಬರು ಶಾಸಕರು ‘ಕೈ’ಕೊಡುವ ಸಾಧ್ಯತೆ ಇದೆ.

ಆದರೆ ಈ ಶಾಸಕರು ಬಿಜೆಪಿ ಸೇರುವುದಿಲ್ಲ. ಬದಲಾಗಿ ಸರ್ಕಾರದ ಪಾಲುದಾರ ಪಕ್ಷವಾದ ವಿಜಯ ಸರದೇಸಾಯಿ ಅವರ ‘ಗೋವಾ ಫಾರ್ವರ್ಡ್‌ ಪಕ್ಷ’ ಸೇರುವ ಸಾಧ್ಯತೆ ಇದೆ.

ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ ಗೋವಾ ಫಾರ್ವರ್ಡ್‌ ಪಕ್ಷದ ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು, ‘ಸೇರುವ ಸಾಧ್ಯತೆ ಇದ್ದಂತಿದೆ’ ಎಂದು ಉತ್ತರಿಸಿದರು. ಆದರೆ ‘ಯಾವಾಗ ಸೇರಬಹುದು’ ಎಂಬ ಬಗ್ಗೆ ಖಚಿತವಾಗಿ ಹೇಳದ ಅವರು, ‘ಕಾದು ನೋಡೋಣ’ ಎಂದಷ್ಟೇ ಉತ್ತರಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರ ರಚಿಸುವ ಸಾಧ್ಯತೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಹಾಗೂ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಅಧಿಕಾರ ವಂಚಿತವಾಗಿರುವ ಕಾರಣ ಬೇಸತ್ತಿರುವ ಈ ಇಬ್ಬರು ಶಾಸಕರು ಗೋವಾ ಫಾರ್ವರ್ಡ್‌ ಪಕ್ಷದ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ಗೆ ಆಸಕ್ತಿಯೇ ಇಲ್ಲ- ಶಿರೋಡ್ಕರ್‌:

‘ಗೋವಾದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ರಚಿಸಲು ಆಸಕ್ತಿಯೇ ಇಲ್ಲ. ಸುಖಾ ಸುಮ್ಮನೇ ‘ನಮಗೆ ಸಂಖ್ಯಾಬಲವಿದೆ’ ಎಂದು ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿತ್ತು. ಅಲ್ಲದೆ, ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆ ಮೇಲೆ 3-4 ಜನರ ಕಣ್ಣಿದ್ದು, ಅವರ ನಡುವೆಯೇ ಕಚ್ಚಾಟವಿದೆ. ಹೀಗಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ ಎಂದು ಮನವರಿಕೆಯಾಗಿ ಬಿಜೆಪಿ ಸೇರಿದೆ’ ಎಂದು ಬಿಜೆಪಿ ಸೇರಿದ ನಿರ್ಗಮಿತ ಶಾಸಕ ಸುಭಾಷ ಶಿರೋಡ್ಕರ್‌ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಕಾಂಗ್ರೆಸ್‌ನಲ್ಲಿ 20 ತಿಂಗಳು ಇದ್ದು ಸಮಯ ವ್ಯರ್ಥ ಮಾಡಿದೆ. ವಿಶ್ವಜಿತ್‌ ರಾಣೆ ಜತೆಗೇ ಬಿಜೆಪಿ ಸೇರಬೇಕಿತ್ತು’ ಎಂದು ಅವರು ಹಳಹಳಿಸಿದ್ದಾರೆ.

Follow Us:
Download App:
  • android
  • ios