ಚುನಾವಣೆ ಪ್ರಕ್ರಿಯೆ ಸುಧಾರಣೆ, ರೈತರಿಗೆ ಸಹಾಯ ಮತ್ತು ಲೋಕಪಾಲ್ ಕಾಯ್ದೆ ಜಾರಿಗೆ ಆಗ್ರಹಿಸಿ 2018ರ ಜನವರಿಯಲ್ಲಿ ದೆಹಲಿಯಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲು ಅಣ್ಣಾ ಹಜಾರೆ ನಿರ್ಧರಿಸಿದ್ದಾರೆ.
ಪುಣೆ: ಚುನಾವಣೆ ಪ್ರಕ್ರಿಯೆ ಸುಧಾರಣೆ, ರೈತರಿಗೆ ಸಹಾಯ ಮತ್ತು ಲೋಕಪಾಲ್ ಕಾಯ್ದೆ ಜಾರಿಗೆ ಆಗ್ರಹಿಸಿ 2018ರ ಜನವರಿಯಲ್ಲಿ ದೆಹಲಿಯಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲು ಅಣ್ಣಾ ಹಜಾರೆ ನಿರ್ಧರಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಜನ ಆಂದೋಲನದಿಂದ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ಅವರು, ತಮ್ಮ ಮುಂದಿನ ಹೋರಾಟದ ಕುರಿತು ಘೋಷಿಸಿದ್ದಾರೆ.
ಪ್ರಧಾನಿಯಾಗಿ ಮೂರು ವರ್ಷವಾದರೂ, ಲೋಕಪಾಲ ಜಾರಿಗೆ ತರದ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ನಿಗ್ರಹ ಕಾನೂನುಗಳ ಶಕ್ತಿ ಕುಂದಿಸುವ ಕಾನೂನು ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
