ತಮ್ಮ ಚಳವಳಿಯಿಂದ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟದಿರಲಿ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ವ್ಯಂಗ್ಯವಾಡಿದ್ದಾರೆ.

ಆಗ್ರಾ: ತಮ್ಮ ಚಳವಳಿಯಿಂದ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟದಿರಲಿ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾ. 23ರಂದು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗುತ್ತದೆ. ರೈತರು ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.

ಜನಲೋಕಪಾಲ್ ಮಸೂದೆ ಜಾರಿಗೊಳಿಸುವ ನಿಟ್ಟಿನಲ್ಲಿ ಯುಪಿಎ ಮತ್ತು ಮೋದಿ ಸರ್ಕಾರ ಎರಡೂ ತಪ್ಪಿತಸ್ಥರು ಎಂದು ಹಜಾರೆ ತಿಳಿಸಿದ್ದಾರೆ.

2011ರಲ್ಲಿ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ ಮೂಲಕ ಗುರುತಿಸಿಕೊಂಡಿದ್ದ ಕೇಜ್ರಿವಾಲ್ ಬಳಿಕ ಪಕ್ಷ ಕಟ್ಟಿ, ದೆಹಲಿ ಸಿಎಂ ಆಗಿದ್ದಾರೆ.