ಮಾಜಿ ಶಾಸಕ ಉಮೇಶ್ ಭಟ್ ನಿಧನ| ಹೃದಯಾಘಾತದಿಂದ ಕೊನೆಯುಸಿರೆಳೆದ ಉಮೇಶ್ ಭಟ್ | ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನ| ಉಮೇಶ್ ಭಟ್ ಅಂಕೋಲ ಕ್ಷೇತ್ರದ ಮಾಜಿ ಶಾಸಕ|

ಬೆಂಗಳೂರು/ಉತ್ತರಕನ್ನಡ, [ಆ.13]: ಅಂದಿನ ಅಂಕೋಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಭಟ್ ಅವರು ಇಂದು [ಮಂಗಳವಾರ] ಸಂಜೆ ವಿಧಿವಶರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂಕೋಲದ ಬಾವಿಕೇರಿ ಗ್ರಾಮದ ಉಮೇಶ್ ಭಟ್ (70) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

1989ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 25122 ಮತಗಳಿಂದ ಗೆಲುವು ಸಾಧಿಸಿದ್ದರು.

ಉಮೇಶ್ ಭಟ್ ಅವರು ಸಂಯುಕ್ತ ಕರ್ನಾಟಕ ಆಡಳಿತ ಮಂಡಳಿಯ ಟ್ರಸ್ಟಿಯಾಗಿದ್ದರು. ಈಗ ಅಂಕೋಲ ವಿಧಾನಸಭೆ ಕ್ಷೇತ್ರವಿಲ್ಲ. ಕ್ಷೇತ್ರ ಮರು ವಿಂಗಡನೆ ಸಂದರ್ಭದಲ್ಲಿ ಅಂಕೋಲ ಬೇರೆ-ಬೇರೆ ಕ್ಷೇತ್ರಗಳಿಗೆ ಹಂಚಿಕೆಯಾಗಿದೆ.